ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ಮುಂದಾಳತ್ವದ ಮಹತ್ತರ ಕಾರ್ಯಕ್ರಮ ಎಕ್ಸ್ ಪ್ಲೋರಿಕ 2026ಕ್ಕೆ ಮೇ 30 ರಂದು ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಚಾಲನೆ ನೀಡಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಸಮಯ ಪಾಲನೆ ಹಾಗೂ ನಾಯಕತ್ವಗುಣಗಳನ್ನು ಬೆಳೆಸುತ್ತದೆ ಎಂದು ಹೇಳಿ ಮುಂಬರುವ ಪರೀಕ್ಷೆಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಯವರಿಗೆ ವಿದ್ಯಾರ್ಥಿಗಳು ಬೀಳ್ಕೊಟ್ಟರು.
ಕಾಲೇಜಿನ ಪ್ರವೇಶಾತಿ ಮತ್ತು ಉದ್ಯೋಗ ಮಾರ್ಗದರ್ಶನದ ನಿರ್ದೇಶಕಿ ಡಾ. ಪದ್ಮಲತಾ, ಆಂಗ್ಲ ಭಾಷೆ ವಿಭಾಗದ ಮುಖ್ಯಸ್ಥ ಶ್ರೀ ರಾಧಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಿಬಿ ಪೌಲ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀ ಹರಿಕೇಶವ್ ಉಪಸ್ಥಿತರಿದ್ದರು.
ಹೊರಾಂಗಣ ಕ್ರೀಡೆಗಳಾಗಿ ಸರ್ಕಲ್ ಕ್ರಿಕೆಟ್, ಬಾಂಬಿಂಗ್ ದ ಸಿಟಿ, ಹಗ್ಗ ಜಗ್ಗಾಟ, ಪೆನಾಲ್ಟಿ ಕಿಕ್, ಡಾಡ್ಜ್ ಬಾಲ್, ಬಲೂನ್ ಬಸ್ಟಿಂಗ್, ಬ್ಯಾಸ್ಕೆಟ್ ಶೂಟಿಂಗ್ ಹಾಗೂ ಒಳಾಂಗಣ ಕ್ರೀಡೆಗಳಾಗಿ ಹುಡುಗರಿಗೆ ಸೀರೆ ಉಡುವ ಸ್ಪರ್ಧೆ, ಗೆಸ್ ದ ಸಾಂಗ್, ಪಾಸಿಂಗ್ ದ ಪಾರ್ಸೆಲ್, ಟಂಗ್ ಟ್ವಿಸ್ಟರ್, ಪೇಪರ್ ಡ್ಯಾನ್ಸ್ ಹಾಗೂ ಬಿಂದಿ ಗೇಮ್ ಗಳನ್ನು ಆಯೋಜಿಸಲಾಗಿತ್ತು.
ಅಂತಿಮ ಬಿಬಿಎ ವಿದ್ಯಾರ್ಥಿನಿಯರಾದ ರುಮಾನ ಮತ್ತು ಶಿವಾನಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.