ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಉದ್ಯೋಗ ಹಾಗೂ ಮಾರ್ಗದರ್ಶನ ಘಟಕದ ವತಿಯಿಂದ ಮಾರ್ಚ್ 28ರಂದು ಉದ್ಯೋಗ ಸಂದರ್ಶನ ಹಾಗೂ ನೇಮಕಾತಿ ಕಾರ್ಯಕ್ರಮ ನೆರವೇರಿತು.
ಅಮೆಜಾನ್ ಕಂಪೆನಿ, ಐ.ಎಫ್.ಬಿ, ಕೊಜೆಂಟ್ ಮತ್ತು ಎಫ್.ಎನ್. ಪಿ (ಫರ್ನ್ಸ್ ಆ್ಯಂಡ್ ಪೆಟೆಲ್ಸ್) ಕಂಪನಿಯ ನೇಮಕಾತಿ ಪ್ರತಿನಿಧಿಗಳಿಂದ ಉದ್ಘಾಟನೆ ನೆರವೇರಿಸಲ್ಪಟ್ಟಿತು.
ಯುಪಿಎಂಸಿಯ ಉದ್ಯೋಗ ಹಾಗೂ ಪ್ರವೇಶಾತಿಯ ನಿರ್ದೇಶಕರಾದ ಡಾ. ಪದ್ಮಲತಾ ಉದ್ಯೋಗದ ಹೊಸ ಸಾಧ್ಯತೆಗಳ ಬಗೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಅಂತಿಮ ಬಿಬಿಎ ಮತ್ತು ಬಿ.ಕಾಂ ವಿದ್ಯಾರ್ಥಿಗಳು ಭಾಗವಹಿಸಿ, ಸದುಪಯೋಗಪಡೆದು, ಸುಮಾರು 60 ವಿದ್ಯಾರ್ಥಿಗಳು ಅಂತಿಮ ಸಂದರ್ಶನಕ್ಕೆ ಆಯ್ಕೆಯಾದರು. ವೃತ್ತಿಮಾರ್ಗದರ್ಶನ ಘಟಕದ ಸಂಯೋಜಕರಾದ ಶ್ರೀ ಹರಿಕೇಶವ್ ಪ್ರಾಸ್ತಾವಿಕ ನುಡಿಯ ಮೂಲಕ ಸ್ವಾಗತಿಸಿದರು.
ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ ಎಸ್ ಶೆಟ್ಟಿ ವಂದಿಸಿ, ನಿರೂಪಿಸಿದರು.