ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಏಪ್ರಿಲ್ 1 ರಂದು 2024-25 ನೇ ಸಾಲಿನ ಕಾಲೇಜು ವಾರ್ಷಿಕಾಂಕ ಸುಪ್ರಭಾ ದ ಅನಾವರಣ ಕಾರ್ಯಕ್ರಮ ಜರಗಿತು.
ಕವಿ, ಕತೆಗಾರ ಹಾಗೂ ಉಡುಪಿಯ ಶ್ರೀ ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಉಮೇಶ್ ಆಚಾರ್ಯ ಸಂಚಿಕೆ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ
ಭಾಷೆಯನ್ನು ಮರೆತರೆ ಸಂಸ್ಕೃತಿಯನ್ನು ಮರೆತಂತೆ,
ಭಾವನೆಗಳನ್ನು ತೋರಿಸಲು ತೆರೆದ ಮನಸ್ಸು ಬೇಕು. ಭಾವ ಶುದ್ಧಿಯಿಂದ ಮಾತ್ರ ಸೃಜನಶೀಲ ಸಾಹಿತ್ಯ ಹುಟ್ಟಲು ಸಾಧ್ಯ. ಸೃಜನಶೀಲ ಸಾಹಿತ್ಯದ ಹುಟ್ಟಿಗೆ ಭಾವನೆಗಳು, ಕಲ್ಪನೆಗಳು, ಚಿಂತನೆಗಳ ತಾಕ-ಲಾಟ ಸೃಷ್ಟಿಯಾಗಬೇಕು. ಓದುತ್ತಾ ಓದುತ್ತಾ ಹೋದಂತೆ ಭಾವನೆಗಳು ಜಾಗ್ರತಗೊಳ್ಳುತ್ತವೆ. ಆದುದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುತ್ತಾ, ತಿಳಿಯುತ್ತಾ ಬರವಣಿಗೆಯಲ್ಲಿ ತೊಡಗಬೇಕು. ತನ್ಮೂಲಕ ಹೊಸ ಜ್ಞಾನ ಸೃಷ್ಟಿಯಾಗಬೇಕೆಂದು ಅವರು
ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸುಪ್ರಭಾ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ ಎಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಪಾದಕ ಮಂಡಳಿಯ ಸದಸ್ಯರಾದ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ಸಂಯೋಜಿಸಿದರು. ಅಂತಿಮ ಪದವಿಯ ವಿದ್ಯಾರ್ಥಿನಿಯರಾದ ವರ್ಷಾ ಕಾಮತ್ ಪರಿಚಯಿಸಿದರು, ಭಾಗ್ಯಶ್ರೀ ವಂದಿಸಿದರು, ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.