ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಫ್ರೆಂಡ್ಸ್ ಗ್ರೂಪ್ ಉಡುಪಿ ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 11 ರಂದು ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಲ್ಪಟ್ಟಿತು.
ಕೆ.ಎಂ.ಸಿ ಆಸ್ಪತ್ರೆ ಮಣಿಪಾಲದ ರಕ್ತ ನಿಧಿ ಘಟಕದ ವೈದ್ಯೆ ಡಾ. ನವಮಿ ಕಾರ್ಯಕ್ರಮ ಉದ್ಘಾಟಿಸಿ ರಕ್ತದಾನವು ಉತ್ತಮ ಕಾರ್ಯ ಮತ್ತು ರಕ್ತವನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಿಲ್ಲ, ಆರೋಗ್ಯವಂತ ಮನುಷ್ಯನಿಂದ ಪಡೆಯಲು ಮಾತ್ರ ಸಾಧ್ಯ. ಪ್ರತಿದಿನವೂ ರಕ್ತದ ಅವಶ್ಯಕತೆ ಮುಖ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ, ಅಪಘಾತಗೊಂಡವರಿಗೆ, ಹೆರಿಗೆಯ ಸಮಯದಲ್ಲಿ ಇರುತ್ತದೆ, ಒಂದು ರಕ್ತದಾನದಿಂದ ಮೂರು ಜನರ ಜೀವ ಉಳಿಸಲು ಸಾಧ್ಯವಾಗುತ್ತದೆ, ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ಸ್ ಗ್ರೂಪ್ ಉಡುಪಿಯ ಗೌರವಾಧ್ಯಕ್ಷರಾದ ಶ್ರೀ ವಸಂತರಾವ್ ಕರಂಬಳ್ಳಿ, ಅಧ್ಯಕ್ಷರಾದ ಶ್ರೀ ಸಂದೀಪ್, ರಕ್ತ ನಿಧಿ ಘಟಕದ ತಂತ್ರಜ್ಞ ಶ್ರೀ ವಿಶ್ವೇಶ್ ಆಚಾರ್ಯ, ಕಾಲೇಜಿನ ನಿರ್ದೇಶಕರಾದ ಶ್ರೀಮತಿ ಆಶಾ ಕುಮಾರಿ, ಉದ್ಯೋಗ ಹಾಗೂ ಪ್ರವೇಶಾತಿಯ ನಿರ್ದೇಶಕರಾದ ಡಾ. ಪದ್ಮಲತಾ ಉಪಸ್ಥಿತರಿದ್ದರು. ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.