ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಬಿಡ್ಡಿಂಗ್ ನಡೆಸಿ ಆಯೋಜಿಸಿದ್ದ ಅಂತರ್ಕಕ್ಷ್ಯಾ ಯುಪಿಎಂಸಿ ವಾಲಿಬಾಲ್ ಟೂರ್ನಮೆಂಟ್ ನ ಉದ್ಘಾಟನೆ ಕಾಲೇಜು ಆವರಣದ ಕ್ರೀಡಾಂಗಣದಲ್ಲಿ ನೆರವೇರಿತು.
ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪ್ರಕಾಶ್ ರಾವ್ ಡಿ ತಮ್ಮ ಉದ್ಘಾಟನಾ ನುಡಿಯಲ್ಲಿ ಕ್ರೀಡೆಯ ಮಹತ್ವದ ಕುರಿತಾಗಿ ಮಾತನಾಡುತ್ತಾ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳು ಕ್ರೀಡೆಗೆ ಮಹತ್ವ ಕೊಡದೇ ನಾನಾ ತರಹದ ದೈಹಿಕ ಸಮಸ್ಯೆಗಳ ರೋಗಕ್ಕೆ ತುತ್ತಾಗುತ್ತಿರುವುದು ಬೇಸರದ ವಿಚಾರ, ಹಾಗೆಯೇ ಸೋಲಿನ ಅನುಭವ ಗೆಲುವಿನ ಸಿಂಚನ ಎರಡರ ಅರಿವಿರುವುದು ಕೇವಲ ಒಬ್ಬ ಆಟಗಾರನಿಗೆ ಮಾತ್ರ ಎಂದು ತಿಳಿಸುತ್ತಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಜೀವನದ ಸಾರ್ಥಕತೆ ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮುಸ್ತಾಫಾ ತೃತೀಯ ಬಿ.ಕಾಂ ಹಾಗೂ ಅಮೀನ್ ಅಹಮ್ಮದ್ ತೃತೀಯ ಬಿಬಿಎ ಮುಖ್ಯ ಆಯೋಜಕರಾಗಿ ಪಂದ್ಯಕೂಟ ಸಂಯೋಜಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಪ್ರಾಸ್ತಾವಿಕ ನುಡಿಯ ಮೂಲಕ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ಜಾವೇದ್ ವಂದಿಸಿದರು. ಶ್ರೀ ನಾಗೇಶ್ ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.