ಸಿಎ- ಸಿಎಸ್- ಸಿಎಂಎ ವೃತ್ತಿಪರ ಕೋರ್ಸ್ ಕಾರ್ಯಾಗಾರ
ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪಿಯುಸಿ ತೇರ್ಗಡೆಯಾಗಿ ಪದವಿ ಶಿಕ್ಷಣದ ಜೊತೆಗೆ ವೃತ್ತಿಪರ ಕೋರ್ಸ್ ಗಳಿಗೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಕಾಲೇಜಿನ ಐಕ್ಯೂಎಸಿ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ವಿ ರೀಚ್ ಅಕಾಡೆಮಿ ಉಡುಪಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಿಎ, ಸಿಎಸ್ ಹಾಗೂ ಸಿಎಂಎ ಕೋರ್ಸ್ ಗಳ ಕುರಿತು ಮಾಹಿತಿ ಕಾರ್ಯಾಗಾರ ಏಪ್ರಿಲ್ 18ರಂದು ನಡೆಯಿತು.
ವಿ ರೀಚ್ ಅಕಾಡೆಮಿ ಉಡುಪಿಯ ಪ್ರವರ್ತಕರಾದ ಸಿಎಸ್ ಸಂತೋಷ್ ಪ್ರಭು ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಿಎ ಇನ್ನಿತರ ವೃತ್ತಿಪರ ಕೋರ್ಸ್ ಗಳಿಗೆ ಅಂಕಗಳಿಕೆಯೇ ಮಾನದಂಡವಾಗದೆ, ಆಸಕ್ತಿ, ಶ್ರದ್ಧೆ ಮತ್ತು ಬದ್ಧತೆ ಅತೀ ಮುಖ್ಯವಾಗಿರುತ್ತದೆ, ಈ ತರದ ಕೋರ್ಸ್ ಕಲಿತು ತೇರ್ಗಡೆ ಹೊಂದಿದವರಿಗೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗ ಅವಕಾಶಗಳು ಸಿಗುತ್ತವೆ, ಇಂತಹ ಕೋರ್ಸ್ ಪಡೆದವರಿಗೆ ಬೇಡಿಕೆ ಜಾಸ್ತಿ ಇದ್ದು ದೇಶದಲ್ಲಿ ಪೂರೈಕೆ ಕಡಿಮೆಯಾಗಿದೆ ಎಂದರು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹುರಿದುಂಬಿಸಿದರು.
ಮಣಿಪಾಲದ ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ ನ ಮುಖ್ಯಸ್ಥರಾದ ಬ್ರಿಗೇಡಿಯರ್ (ಡಾ) ಎಸ್. ಎಸ್ ಪಾಬ್ಲಾ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ನಿರ್ದೇಶಕರಾದ ಶ್ರೀಮತಿ ಆಶಾ ಕುಮಾರಿ, ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು.
ಕಾಲೇಜಿನ ಉದ್ಯೋಗ ಹಾಗೂ ಪ್ರವೇಶಾತಿಯ ನಿರ್ದೇಶಕರಾದ ಡಾ. ಪದ್ಮಲತಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಹನಾ ಎಂ. ಜಿ ಕಂಪ್ಯೂಟರ್ ಆಧಾರಿತ ಸ್ಕಿಲ್ ಡಿಪ್ಲೊಮಾಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಕಾರ್ಯಕ್ರಮ ನಿರೂಪಿಸಿದರು.