ದಿನಾಂಕ 15/08/2026 ನೇ ಶನಿವಾರ ಸ. ಕಿ. ಪ್ರಾ. ಶಾಲೆ ಮಾಲೆತ್ತೋಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನ್ನು ಆಚರಿಸಲಾಯಿತು. ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀ ಜಯ ಪ್ರಶಾಂತ್ ಇವರು ಧ್ವಜಾರೋಹಣ ನೆರವೇರಿಸಿ, ಧ್ವಜಾರೋಹಣದ ಕುರಿತು ಮಾತನಾಡಿದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ತಿಗೆ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಸದಸ್ಯರಾದ ಶ್ರೀಮತಿ ನಾಗವೇಣಿ ಇವರು ವಹಿಸಿದ್ದರು.ಎಸ್. ಡಿ. ಎಂ. ಸಿ. ಉಪಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಎಚ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಎಂ ಹಾಗೂ ಮುಖ್ಯ ಗುರುಗಳಾದ ಶ್ರೀ ತಿಮ್ಮಪ್ಪ ಇವರು ಅತಿಥಿಗರಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅತಿಥಿ ಶಿಕ್ಷಕರಾದ ಶ್ರೀಮತಿ ಚಂದ್ರಕಲಾ ಇವರು ನಿರೂಪಿಸಿದರು. ಶಾಲಾ ಶಿಕ್ಷಕಿ ಯಾದ ಶ್ರೀಮತಿ ಶಿವಶಂಕರಿ ಇವರು ಸ್ವಾಗತಿಸಿದರು ಹಾಗೂ ಶಿಕ್ಷಕರಾದ ಅರ್ಚನಾ ರೈ ಪಿ. ಇವರು ಧನ್ಯವಾದ ಸಮರ್ಪಣೆ ಮಾಡಿ ಮಕ್ಕಳಿಗೆ ಸಿಹಿ ತಿನಿಸು ಕೊಟ್ಟು 80ನೇ ಸ್ವಾತಂತ್ಯ್ರೋತ್ಸವ ವನ್ನು ಆಚರಿಸಲಾಯಿತು.