ಕಕ್ಯಪದವು: ದಿನಾಂಕ 5/8/2026 ರಂದು ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ಟಸ್ಟ್ (ರಿ). ನಡೆಸಲ್ಪಡುವ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ” ಕ್ರಿಪ್ಟೋ ಕರೆನ್ಸಿ ಮತ್ತು ಭಾರತೀಯ ಷೇರು ಮಾರುಕಟ್ಟೆ ಎಂಬ ವಿಷಯದ ಕುರಿತು ವಿಶೇಷ ಕಾರ್ಯಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಗಾರವನ್ನು ಸಂಸ್ಥೆಯ ಸಂಯೋಜಕರಾದ ಯಶವಂತ್ ಜಿ. ನಾಯಕ್ ಅವರು ನಡೆಸಿಕೊಟ್ಟರು.
ಕಾರ್ಯಗಾರದಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಪರಿಚಯ, ಉಳಿತಾಯವನ್ನು ಹೂಡಿಕೆಯಾಗಿಸುವ ಮಹತ್ವ, ವಿವಿಧ ಷೇರುಗಳ ಖರೀದಿ-ಮಾರಾಟದ ಪ್ರಾಯೋಗಿಕ ತರಬೇತಿ, ಕ್ರಿಪ್ಟೋ ಕರೆನ್ಸಿಯ ಪರಿಚಯ, ಭಾರತೀಯ ಷೇರು ಮಾರುಕಟ್ಟೆ ಮತ್ತು ಕ್ರಿಪ್ಟೋ ಕರೆನ್ಸಿಯ ನಡುವಿನ ವ್ಯತ್ಯಾಸಗಳ ಕುರಿತು ವಿವರವಾಗಿ ತಿಳಿಸಿಕೊಡಲಾಯಿತು.
ಜೊತೆಗೆ ಬಿಟ್ ಕ್ವಾಯಿನ್, XRP, Ethereum, Binance Coin ಮುಂತಾದ ಕ್ರಿಪ್ಟೋ ಕರೆನ್ಸಿಗಳ ವಹಿವಾಟಿನ ಕುರಿತು ಪ್ರಾಯೋಗಿಕ ಅಧಿವೇಶನವನ್ನೂ ನಡೆಸಲಾಯಿತು. ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿ ಹೂಡಿಕೆ, ಡಿಜಿಟಲ್ ಆರ್ಥಿಕತೆ ಹಾಗೂ ಹಣಕಾಸು ಜಾಗೃತಿಯ ಕುರಿತು ಅಮೂಲ್ಯ ಮಾಹಿತಿಯನ್ನು ಪಡೆದುಕೊಂಡರು. ಡಿಜಿಟಲ್ ಲ್ಯಾಬ್ ಚಟುವಟಿಕೆಗಳೊಂದಿಗೆ ಕಾರ್ಯಗಾರವು ಯಶಸ್ವಿಯಾಗಿ ನೆರವೇರಿತು.