ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ಬಜ್ಪೆ ಇಲ್ಲಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ರತ್ನಾಕರ ಇವರು ದಿನಾಂಕ 31-07-2026 ರಂದು ವಯೋನಿವ್ರೃತ್ತಿ ಹೊಂದಿರುತ್ತಾರೆ. ಆ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ವಿದಾಯ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀಯುತರು ಈ ಹಿಂದೆ ಮಂಗಳೂರಿನ ಗಣಪತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಶುಪಾಲರ ಸಂಘದ ಖಜಾಂಚಿಯಾಗಿ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಲಾಯಿತು. ಶ್ರೀಯುತರು ಎನ್. ಎಸ್. ಎಸ್. ನಲ್ಲಿ ಸಲ್ಲಿಸಿದ್ದ ಸೇವೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

ಸಭಾಧ್ಯಕ್ಷರೂ ಸಂಸ್ಥೆಯ ಸಂಚಾಲಕರೂ ಆದ ವಂದನೀಯ ಫಾ. ಆಂಡ್ರೂ ಡಿಸೋಜ ಅವರು ಶ್ರೀ ರತ್ನಾಕರ ಅವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮತ್ತು ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿನ ಸೇವೆಗಾಗಿ ಅವರನ್ನು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ರತ್ನಾಕರ ಅವರು ತಾವು ಸೇವೆ ಸಲ್ಲಿಸಿದ ಎರಡೂ ಸಂಸ್ಥೆಗಳ ಆಡಳಿತ ಮಂಡಳಿಗಳ, ಸಹೋದ್ಯೋಗಿಗಳ, ಮತ್ತು ವಿದ್ಯಾರ್ಥಿಗಳ ಸಹಾಯ, ಸಹಕಾರಕ್ಕಾಗಿ ಕ್ರೃತಜ್ಞತೆಯನ್ನು ಸಲ್ಲಿಸಿದರು.

ಪ್ರಭಾರ ಪ್ರಾಂಶುಪಾಲರು ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಜ್ಯೋತಿ ಬೆನಿಟಾ ರೊಸಾರಿಯೊ ಕಾಮತ್ ವಂದಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಆಲ್ವಿನ್ ಅರುಣ್ ನೊರೊನ್ಹಾ, ಬಜ್ಪೆ ಪ್ಯಾರಿಷ್ ಕೌನ್ಸಿಲ್ ಉಪಾಧ್ಯಕ್ಷರಾದ ಶ್ರೀ ವಿಲಿಯಂ ಸಿರಿಲ್ ಲೀವಿಸ್, ಬಜ್ಪೆ ಇಗರ್ಜಿಯ ಸಹಾಯಾಕ ಧರ್ಮ ಗುರುಗಳಾದ ವಂದನೀಯ ಫಾ. ವಿಜಯ್ ಮೊಂತೇರೊ, ಕ್ರಪಾಸಾಧನ ಸೆಮಿನರಿಯ ರೆಕ್ಟರ್ ವಂದನೀಯ ಫಾ. ಕೆವಿನ್ ಲಾರೆನ್ಸ್ ಡಿಸೋಜ ಆಡಳಿತ ಮಂಡಳಿಯ ಸದಸ್ಯರು, ಶ್ರೀ ರತ್ನಾಕರ ಅವರ ಧರ್ಮಪತ್ನಿ ಶ್ರೀಮತಿ ಲಲಿತಾ ಮತ್ತು ಪುತ್ರ ಶ್ರೀ ಜಯರಾಜ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಶ್ರೀ ರಾಮಪ್ರಸಾದ್ ಡಿ. ಆರ್. ಸಹೋದ್ಯೋಗಿಯಾಗಿ, ವಿದ್ಯಾರ್ಥಿ ನಾಯಕಿ ಕುಮಾರಿ ಒಲ್ವಿಟ ವಿಯೋಲ ರಾಡ್ರಿಗಸ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಸುಧೀರ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಅರುಣ್ ಡಿಸೋಜ ನಿರ್ವಹಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಕಛೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…