ಮಂಗಳೂರು: ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU)ಕಲಿಕಾ ಸಹಾಯ ಕೇಂದ್ರವನ್ನು ಇಂದು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಕೆನರಾ ಕಾಲೇಜಿನ ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ದೀಪ್ತಿ ನಾಯಕ್ ಅವರು, ವಿದ್ಯಾರ್ಥಿಗಳು KSOU ಮೂಲಕ ಲಭ್ಯವಿರುವ ವಿವಿಧ ಡಿಪ್ಲೊಮಾ ಹಾಗೂ ಪ್ರಮಾಣಪತ್ರ ಕೋರ್ಸ್‌ಗಳ ಪ್ರಯೋಜನ ಪಡೆದುಕೊಂಡು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಮಂಜುನಾಥ್ ಎ.ಆರ್., ಪ್ರಭಾರ ಮಂಗಳೂರು ಪ್ರಾದೇಶಿಕ ನಿರ್ದೇಶಕರು, KSOU, ಅವರು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರಾಘವೇಂದ್ರ ಹೊಳ್ಳ ಅವರು, ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದ ಜೊತೆಗೆ ವಿವಿಧ ಆಡ್-ಆನ್ ಕೋರ್ಸ್‌ಗಳನ್ನು ಮಾಡಿಕೊಂಡು ತಮ್ಮ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಮಾಲಿನಿ ಎನ್. ಹೆಬ್ಬರ್, ಪ್ರಾಂಶುಪಾಲರು, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಉಪಸ್ಥಿತರಿದ್ದರು. ಮಿಸ್ರಿಯಾ ಕಾರ್ಯಕ್ರಮ ನಿರೂಪಿಸಿದರು, ತನ್ಮಯೀ ವಂದನಾರ್ಪಣೆ ಸಲ್ಲಿಸಿದರು. ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನಲ್ಲಿ KSOU ಕಲಿಕಾ ಸಹಾಯ ಕೇಂದ್ರ ಆರಂಭವಾಗಿರುವುದು ವಿದ್ಯಾರ್ಥಿಗಳಿಗೆಪದವಿಯ ಜೊತೆಗೆ ಹೆಚ್ಚುವರಿ ಕೌಶಲ್ಯ ಮತ್ತು ವೃತ್ತಿಪರ ಅರ್ಹತೆಗಳನ್ನು ಪಡೆಯಲು ಉತ್ತಮ ಅವಕಾಶವಾಗಿದೆ.
ಕೋರ್ಸ್‌ಗಳ ಲಭ್ಯತೆ:
KSOU ಕಲಿಕಾ ಸಹಾಯ ಕೇಂದ್ರದ ಮೂಲಕ ಪದವಿ ಹಂತದಲ್ಲಿ B.A., B.Com., B.B.A., B.C.A., B.Ed., B.Lib.I.Sc., B.Sc. (Hons.) Information Technology, B.S.W. ಸೇರಿದಂತೆ ವಿವಿಧ UG ಕಾರ್ಯಕ್ರಮಗಳು, Information Technology, Computer Application, Nutrition and Health Education, Early Childhood Care and Education, Kannada, Journalism, Translation Studies, Astrology ಮತ್ತು Vaastu Sastra ಸೇರಿದಂತೆ ವಿವಿಧ ಡಿಪ್ಲೊಮಾ ಕೋರ್ಸ್‌ಗಳು ಹಾಗೂ M.Com., MBA, MA, M.Sc., MCA ಮತ್ತು M.Lib.I.Sc. ಸೇರಿದಂತೆ ವಿವಿಧ ಸ್ನಾತಕೋತ್ತರ (PG) ಕಾರ್ಯಕ್ರಮಗಳು ಲಭ್ಯವಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಗುರಿಗಳಿಗೆ ಅನುಗುಣವಾಗಿ ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬಹುದು.
ಸಂಪರ್ಕಕ್ಕಾಗಿ:
ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶಕ್ಕೆ ಸಂಬಂಧಿಸಿದ ವಿವರಗಳಿಗಾಗಿ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ KSOU ಕಲಿಕಾ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ: 0824-2457167 / 7204706167/ 9901326167