ಕೊಣಾಜೆ, 28 ಆಗಸ್ಟ್ 2026: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದಕ್ಷಿಣ ಕನ್ನಡ ಹಾಗೂ ಕೊಣಾಜೆಯ ವಿಶ್ವಮಂಗಳ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಉಳ್ಳಾಲ ತಾಲೂಕು ಮಟ್ಟದ ಪಿಯು ಕಾಲೇಜುಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ 2026’ ವಿಶ್ವಮಂಗಳ ಸಭಾಂಗಣದಲ್ಲಿ ವೈಭವದಿಂದ ನೆರವೇರಿತು.

ಉದ್ಘಾಟನಾ ಸಮಾರಂಭ:
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಶ್ರೀ ಸಂತೋಷ್ ಬಿ. ಜಗಲಾಸರ್ (KAS) ಅವರು ಉದ್ಘಾಟಿಸಿ, “ಶಟಲ್ ಬ್ಯಾಡ್ಮಿಂಟನ್ ನನ್ನ ನೆಚ್ಚಿನ ಕ್ರೀಡೆಯಾಗಿದೆ. ಈ ಆಟದಲ್ಲಿ ಯಶಸ್ಸು ಗಳಿಸಲು ಶಿಸ್ತು ಮತ್ತು ಏಕಾಗ್ರತೆ ಅತ್ಯಂತ ಅಗತ್ಯ” ಎಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (DDPU) ಶ್ರೀಮತಿ ರಾಜೇಶ್ವರಿ ಹೆಚ್. ಹೆಚ್. ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಸಮಾರೋಪ ಹಾಗೂ ಬಹುಮಾನ ವಿತರಣೆ:
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವಮಂಗಳ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಶ್ರೀ ವಿಜಯರಾಜ್ ಅವರು ಮಾತನಾಡಿ, “ಕ್ರೀಡೆ ಮತ್ತು ಆಟಗಳು ಜೀವನದ ಅವಿಭಾಜ್ಯ ಅಂಗ. ಇವು ನಮ್ಮನ್ನು ಸದಾ ಆರೋಗ್ಯವಾಗಿ ಹಾಗೂ ಸದೃಢವಾಗಿಡಲು ನೆರವಾಗುತ್ತವೆ” ಎಂದು ತಿಳಿಸಿ, ಸ್ಪರ್ಧಿಗಳು ಹಾಗೂ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಜಗದೀಶ್ ಪ್ರಸಾದ್ ಡಿ. ಅವರು ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಪೂರ್ಣಿಮಾ ಡಿ. ಶೆಟ್ಟಿ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅಮೃತಾ ಉದ್ಘಾಟನಾ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರೆ, ಜೀವಶಾಸ್ತ್ರ ಉಪನ್ಯಾಸಕಿ ಕುಮಾರಿ ಜಯಶ್ರೀ ಸಮಾರೋಪ ಸಮಾರಂಭದ ವಂದನಾರ್ಪಣೆ ಮಾಡಿದರು. ಉಪನ್ಯಾಸಕ ಶ್ರೀ ದಿಲೀಪ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಕ್ರೀಡಾ ಸಂಯೋಜಕ ಶ್ರೀ ಮಹಮ್ಮದ್ ಅಶ್ರಫ್, ವಿಶ್ವ ಮಂಗಳ ವಿದ್ಯಾ ಸಂಸ್ಥೆಯಕೋಶಾಧಿಕಾರಿ ಶ್ರೀ ಸುಬ್ಬ ನಾಯ್ಕ್ ಎಮ್. ವಿಶ್ವ ಮಂಗಳ ಆಡಳಿತ ಮಂಡಳಿಯ ಸದಸ್ಯರಾದ ಡಾ|ನಿರ್ಮಲ, ಪಂದ್ಯದ ತೀರ್ಪುಗಾರರಾದ ಡಾ. ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಗುರುರಾಜ್ ಮಂಗಳೂರು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಶಾಂತ್ ಕೆ. ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…