ಉಡುಪಿ, 27 ಆಗಸ್ಟ್ 2026: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಗಸ್ಟ್ 27ರಂದು ಓಣಂ ಹಬ್ಬದ ಪ್ರಯುಕ್ತ ವಿಶೇಷ ಸಂಭ್ರಮಾಚರಣೆ ಹಾಗೂ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ರವಿರಾಜ್ ಹೆಚ್. ಪಿ ಕಾರ್ಯಕ್ರಮವನ್ನು ಪೂಕಳಂ ನಡುವೆ ದೀಪ ಪ್ರಜ್ವಲಿಸಿ, ಅಂದಿನ ಅವರ ಕಾಲೇಜು ದಿನಗಳನ್ನು ಮೆಲಕುಹಾಕುತ್ತಾ, ವಿದ್ಯಾರ್ಥಿಗಳ ಯಶಸ್ವೀ ನಿರ್ವಹಣೆಯನ್ನು ಮನತುಂಬಿ ಶ್ಲಾಘಿಸಿದರು.
ಕಾಲೇಜಿನ ಅನುಸರಣೆಯ ನಿರ್ದೇಶಕರಾದ ಪ್ರೊ. ಆಶಾ ಕುಮಾರಿ ಓಣಂ ವಿಶೇಷತೆ ಮತ್ತು ಅದರ ಪ್ರಾಮುಖ್ಯತೆ ಹಾಗೂ ಆಚರಣೆಯ ವೈವಿಧ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯೋಗ ಮತ್ತು ಪ್ರವೇಶಾತಿ ನಿರ್ದೇಶಕಿ ಡಾ. ಪದ್ಮಲತಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಸಿಬಿ ಪಾಲ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರಿಕೇಶವ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಹ ಯೋಜನಾಧಿಕಾರಿ ಪ್ರೊ. ಚಂದ್ರಶೇಖರ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಆಯೇಷಾ ಅಜೀಂ ದ್ವಿತೀಯ ಬಿಸಿಎ ಸ್ವಾಗತಿಸಿದರು, ತೃತೀಯ ಬಿ. ಕಾಂ ವಿದ್ಯಾರ್ಥಿನಿಯರಾದ ಧೃತಿ ವಂದಿಸಿ, ಐಶ್ವರ್ಯ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳು ಜರುಗಿದವು.