ಸಂತ ಜೋಸಫರ ಪದವಿ ಪೂರ್ವ ಕಾಲೇಜಿನಲ್ಲಿ, 2026ರ ಪಬ್ಲಿಕ್ ಪರೀಕ್ಷೆಯ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ 13/06/2026ರಂದು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಸಂಚಾಲಕರಾದ ರೆ.ಫಾ. ಆಂಡ್ರು ಡಿಸೋಜರವರು ಅಧ್ಯಕ್ಷತೆ ವಹಿಸಿದ್ದರು. ಪ್ರಭಾವ ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ಉಡುಪ, ಪ್ರಸ್ತಾವಿಸಿ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ, ಶ್ರೀಮತಿ ರೈನ ರೊಡ್ರಿಗಸ್ ರವರು ವಂದಿಸಿದರು.
ವಿವಿಧ ವಿಭಾಗಗಳ 23 ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತ ವಿದ್ಯಾರ್ಥಿಗಳ ಪರವಾಗಿ ಜೆನಿಶ ಮೇರಿ ಸಿಸಿಲಿಯ ಡಿಸೋಜ ಮತ್ತು ಜೈನಬ ಫಾಝಿಲ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಶದೀಫ (ವಾಣಿಜ್ಯ ವಿಭಾಗ) ಮತ್ತು ಸಚಿನ್ ಬಸವರಾಜ್ ನಾಯಕ್ (ಕಲಾ ವಿಭಾಗ) ರವರಿಗೆ ಅರ್ಥಶಾಸ್ತ್ರ ಉಪನ್ಯಾಸಕರಾದ, ಶ್ರೀ ರತ್ನಾಕರ ಇವರು ಪ್ರಾಯೋಜಿಸಿದ ಬಹುಮಾನವನ್ನು ವಿತರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ಉಪನ್ಯಾಸಕರಾದ, ಶ್ರೀ ಹರೀಶ್ ಐತಾಳ್ ಪಿ. ಆಯೋಜಿಸಿದ್ದರು.

ನಂತರ ನಡೆದ ನವಜ್ಞಾನ ವಿಕಸನ ಕಾರ್ಯಕ್ರಮದಲ್ಲಿ ಸಂಚಾಲಕರಾದ ರೆ.ಫಾ. ಅಂಡ್ರು ಡಿಸೋಜರವರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ, ಕೆನರಾ ಪದವಿ ಪೂರ್ವ ಕಾಲೇಜು, ಮಂಗಳೂರು, ಇಲ್ಲಿನ ಕನ್ನಡ ಉಪನ್ಯಾಸಕರಾದ ಶ್ರೀ ರಘು ಇಡೀದು ರವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಲಹೆಗಳನ್ನು ನೀಡಿದರು. ಪ್ರಭಾರ ಪ್ರಾಂಶುಪಾಲರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ, ಶ್ರೀ ರಾಮಪ್ರಸಾದ್ ಡಿ.ಆರ್. ಪರಿಚಯಿಸಿದರು ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬಜ್ಪೆ ಆರಕ್ಷಕ ಠಾಣೆಯ ಸಬ್ ಇನ್ಸಪೆಕ್ಟರ್ ಶ್ರೀ ಅಶೋಕ್ ರವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾದಕ ವಸ್ತುಗಳು, ಸೈಬರ್ ಕ್ರೈಂ ಮತ್ತು ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ, ಶ್ರೀಮತಿ ಜೋತಿ ಬೆನಿಟ ರೊಝಾರಿಯೊ ಕಾಮತ್‌ರವರು ವಂದನಾರ್ಪಣೆಗೈದರು. ರಸಾಯನಶಾಸ್ತ್ರ ಉಪನ್ಯಾಸಕರಾದ, ಕು. ಆಶಲ್ ರಿಯ ಸಿಲ್ವೇರಾ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಮತ್ತು ಕಛೇರಿ ಸಿಬ್ಬಂದಿ ಭಾಗವಹಿಸಿದ್ದರು. ಶ್ರೀ ಅರುಣ್ ಡಿಸೋಜ, ದೈಹಿಕ ಶಿಕ್ಷಣ ಉಪನ್ಯಾಸಕರು, ಕಾರ್ಯಕ್ರಮ ಆಯೋಜಿಸಿದ್ದರು.