ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಮಂತ್ರಿಮಂಡಲದ ರಚನೆ ಮಾಡುವ ಸಲುವಾಗಿ ಜೂನ್ 10 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಚುನಾವಣೆಯನ್ನು ನಡೆಸಲಾಯಿತು.
ಎಲ್ಲಾ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮಾದರಿ (EVM) ಯ ಮೂಲಕ ನೇರವೇರಿತು. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮುಡಿಸುವ ಉದ್ದೇಶದೊಂದಿಗೆ ಮತದಾನದ ಕಾರ್ಯ ಚಟುವಟಿಕೆಗಳನ್ನು ಆಧುನಿಕ ಮೊಬೈಲ್ ತಂತ್ರಜ್ಞಾನದ ಮೂಲಕ ಮಾಡಲಾಯಿತು. ವಿವಿಧ ಶಿಕ್ಷಕ ಸಿಬ್ಬಂದಿಗಳ ಸಹಕಾರದಿಂದ ಮತದಾನ ಪ್ರಕ್ರಿಯೆಯು ಶಿಸ್ತಿನಿಂದ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿತು. ಹಾಗೂ ಮತಎಣಿಕೆಯನ್ನು ಮಾಡಿ ಫಲಿತಾಂಶ ಘೋಷಣೆಯನ್ನು ಮಾಡಲಾಯಿತು.
ಶಾಲಾ ವಿದ್ಯಾರ್ಥಿ ಸಂಘದ ನಾಯಕನಾಗಿ ಹಿತೇಶ್. ಟಿ . ರ್., ಉಪ ನಾಯಕನಾಗಿ ನಿಶಾನ್ . ಎ.ಕೆ.ಆಯ್ಕೆಯಾದರು. ಅದರಂತೆ ಶಿಸ್ತು ಮಂತ್ರಿಯಾಗಿ ರಶ್ಮಿ ಪ್ರಭು , ಸಾಂಸ್ಕೃತಿಕ ಮಂತ್ರಿಯಾಗಿ ಶರಣ್ಯ , ಕ್ರೀಡಾಮಂತ್ರಿಯಾಗಿ ಸುಜನ್. ಹೆಚ್. ಕೆ , ಅರೋಗ್ಯ ಮತ್ತು ಶಿಕ್ಷಣ ಮಂತ್ರಿಯಾಗಿ ಅಧಿತಿ. ಎಮ್. ಪ್ರಭು ಇವರುಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಹಾಗೂ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಮುಖ್ಯಶಿಕ್ಷಕಿ ಶ್ರೀಮತಿ ವಿಜಯ. ಕೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ವಿಜೇತರನ್ನು ಅಭಿನಂದಿಸಿದರು.