ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಥಳೀಯ ಸ್ವಾಮಿ ವಿವೇಕಾನಂದ ಪದವೀ ಪೂರ್ವ ವಿದ್ಯಾಲಯದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎನ್. ಪದ್ಮಶೇಖರ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯಲ್ಲಿ ಹನ್ನೆರಡು ವರ್ಷಗಳಿಂದ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಸುರೇಶ್ ಎಸ್. ಇವರು ಧ್ವಜಾರೋಹಣಗೈದ ಬಳಿಕ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ಹಮ್ಮಿಕೊಳ್ಳಲಾಯ್ತು.
ಮುಖ್ಯ ಅತಿಥಿಗಳಾಗಿದ್ದ ಸುರೇಶ್ ಮತ್ತು ಅನುಸೂಯ ದಂಪತಿಗಳಿಗೆ ಶಾಲು ಹೊದೆಯಿಸಿ ಹಾರ ಫಲ ತಾಂಬೂಲ ಹಾಗೂ ಕಿರು ಕಾಣಿಕೆಯನ್ನು ಅರ್ಪಿಸಲಾಯ್ತು.
ಆಡಳಿತ ಮಂಡಳಿಯ ಸದಸ್ಯ ಎಂ. ಎಂ. ಶರೀಫ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜ್ ನ ಪ್ರಾಂಶುಪಾಲೆ ಶ್ರೀಮತಿ ಗಾಯತ್ರಿ ಪ್ರಭು ಎಂಭತ್ತನೇ ಸ್ವಾತಂತ್ರ್ಯದಿನಾಚರಣೆಯ ಸಂದೇಶ ನೀಡಿದರು. ಮುಖ್ಯ ಶಿಕ್ಷಕ ಶ್ರೀ ವಾಸು. ಕೆ. ಅತಿಥಿಗಳ ಪರಿಚಯ ಮಾಡಿದರು. ಆಡಳಿತಾಧಿಕಾರಿಗಳಾದ ಶ್ರೀ ಪ್ರೇಮನಾಥ್ ಶೆಟ್ಟಿ ನಿವೃತ್ತರಿಗೆ ಶುಭಕೋರಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು ಪರಿಶ್ರಮ ಅಚಲವಾಗಿದ್ದರೆ ಸದಾ ಸ್ವಾತಂತ್ರ್ಯ ನಮ್ಮ ಕೈಲಿರುತ್ತದೆ. ಈ ಸ್ವಾತಂತ್ರ್ಯಕ್ಕೆ ಆತ್ಮಾರ್ಪಣೆ ಮಾಡಿದ ಗಣ್ಯರಿಗೆ ಸದಾ ಕೃತಜ್ಞರಾಗಿರೋಣ ಎಂದು ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಕರೆ ಕೊಟ್ಟರು.
ಕುಮಾರಿ ಉಷಾ ಸ್ವಾಗತಿಸಿ ಕುಮಾರಿ ಅನ್ವಿತಾ ಕಾರ್ಯಕ್ರಮ ನಿರೂಪಿಸಿ ವೈಶಾಖ್ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಗಿದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.