ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಇಂದು ಮಂಗಳೂರಿನ ಪ್ರತಿಷ್ಠಿತ ಎಂ ಆರ್. ಪಿ ಎಲ್ ಕಂಪನಿಯಿಂದ 2025-26ನೇ ಸಾಲಿನ ಸಿ ಎಸ್ ಆರ್ ಫಂಡಿನಿಂದ ನೀಡಲ್ಪಟ್ಟ ಕೊಡುಗೆಗಳಾದ 10 ಕಂಪ್ಯೂಟರ್, ವಿವಿಧ ಪೀಟೋಪಕರಣ ನೀರು ಶುದ್ದಿಕಾರಕ,ಮೂರು ವಿಶಿಷ್ಟ ಕುರ್ಚಿಗಳು, ಮೂರು ಕಪಾಟುಗಳು, ಕೆನರಾ ಬ್ಯಾಂಕ್ ಗುರುಪುರ ಶಾಖಾ ಪ್ರಬಂಧಕರಿಂದ ನೀಡಲ್ಪಟ್ಟ ವಾಷ್ ಬೇಸಿನ್, ಪ್ರೊಮಿಕ್ಸ್ ನ ಮಾಲಕರಾದ ಪ್ರತಾಪ್ ಭಂಢಾರಿಯವರಿಂದ ಕೊಡಲ್ಪಟ್ಟ 2 ಕಂಪ್ಯೂಟರ್ ಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎನ್ ಪದ್ಮಶೇಖರ್ ಜೈನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉದ್ಘಾಟಕರಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಅವರು ಈ ಕೊಡುಗೆಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಸಂಸ್ಥೆಯ ಯಶಸ್ಸಿಗೆ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅನೇಕ ಸಂಘ-ಸಂಸ್ಥೆಗಳು ದಾನಿಗಳು ಸದಾ ನಿಮ್ಮ ಜೊತೆಗಿರುತ್ತಾರೆ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ ಅಭ್ಯಾಸ ನಿರತರಾಗಿ ಹೆತ್ತವರು ಹಾಗೂ ಸಮಾಜದ ಹಿರಿಯರಿಗೆ ಗೌರವತವಾಗಿ ನಡೆದುಕೊಂಡು ತಮ್ಮ ಬದುಕನ್ನು ಉಜ್ವಲಗೊಳಿಸಿ ಕೊಳ್ಳಬೇಕು ಎಂದು ಕರೆಕೊಟ್ಟರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಎಂ ಆರ್ ಪಿ ಎಲ್ ನ ಪ್ರಬಂಧಕರಾದ ಕೇಶವ ಪಾಟೀಲ್
ಮಾತಾಡಿ “ವಿದ್ಯಾರ್ಥಿಗಳು ಈ ದೇಶದ ಭಾವೀ ಪ್ರಜೆಗಳು ಅವರ ಭವಿಷ್ಯಕ್ಕಾಗಿ ತಮ್ಮ ಸಂಸ್ಥೆ ಯಾವತ್ತೂ ಮುಂಚೂಣಿಯಲ್ಲಿ ನಿಂತು ಸದಾ ಬೆಂಬಲವನ್ನು ಕೊಡುತ್ತಿದ್ದು ಮುಂದೆಯೂ ಈ ಸೇವೆ ನಿರಂತರವಾಗಿರುತ್ತದೆ” ಎಂದು ಆಶ್ವಾಸನೆ ನೀಡಿದರು.

ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಸದಸ್ಯರುಗಳಾದ ಎಂಎಂ ಶರೀಫ್ ನಾರ್ಬರ್ಟ್ ಮಥಾಯಸ್ ಪ್ರಸಾದ್ ಕುಮಾರ್ ಎಡಪದವು
ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರುಹಾಗೂ ಆಡಳಿತಾಧಿಕಾರಿಗಳೂ ಆದ ಪ್ರೇಮನಾಥ್ ಶೆಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ವಾಸು. ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಎಸ್. ಪ್ರಭು. ಸ್ವಾಗತಿಸಿ ಪ್ರಾಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಶಾಂತರಾಮ ರೈ. ಡಿ. ವಿ. ನಿರೂಪಿಸಿ, ಪ್ರಾಢಶಾಲಾ ಕನ್ನಡ ಭಾಷಾ ಶಿಕ್ಷಕಿ ಕುಮಾರಿ ವಸಂತಿ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…