ವೇಣೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು 2026ರ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ವಿದ್ವತ್‌ ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಡಿ. ಅವರು

ಇವರು ಖ್ಯಾತ ಗುರುಗಳಾದ ವಿದುಷಿ ಸ್ವಾತಿ ಜಯರಾಮ್ ಹಾಗೂ ವಿದುಷಿ ಪೃಥ್ವಿ ಸತೀಶ್‌ರವರಿಂದ ಭರತನಾಟ್ಯದಲ್ಲಿ ಕಠಿಣ ತರಬೇತಿಯನ್ನು ಪಡೆದಿರುತ್ತಾರೆ. ಡಾ. ವೀಕ್ಷಿತಾ ಡಿ. ಅವರು ವೇಣೂರಿನ ಬೀಡಿ ಕಾಂಟ್ರಾಕ್ಟರ್ ದೇಜಪ್ಪ ಪೂಜಾರಿ ಮತ್ತು ಶ್ರೀಮತಿ ವಿದ್ಯಾವತಿ ದಂಪತಿಯು ಪುತ್ರಿಯಾಗಿದ್ದು, ಪ್ರಸ್ತುತ ಗೋಳಿಯಂಗಡಿಯ ಸ್ವಸ್ತಿಕ್ ಕ್ಲಿನಿಕ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ
ಬ್ಯುಸಿಯ ನಡುವೆಯೂ ಕಲೆಗೆ ಸಮಯ ಮೀಸಲಿಟ್ಟು ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.

ವೈದ್ಯಕೀಯ ಸೇವೆಯ ಬಿಡುವಿಲ್ಲದ ಜವಾಬ್ದಾರಿಯ ನಡುವೆಯೂ ಭರತನಾಟ್ಯದಂತಹ ಕಠಿಣ ಕಲೆಯಲ್ಲಿ ವಿದ್ವತ್ ಪದವಿ ಪಡೆದಿರುವ ಡಾ. ವೀಕ್ಷಿತಾ ಡಿ. ಅವರ ಈ ಸಾಧನೆಯು, “ಮನಸ್ಸಿದ್ದರೆ ಮಾರ್ಗ ಹಾಗೂ ಆಸಕ್ತಿಯಿದ್ದರೆ ವೃತ್ತಿಯ ಜೊತೆ ಪ್ರವೃತ್ತಿಯನ್ನೂ ಯಶಸ್ವಿಯಾಗಿ ಮುನ್ನಡೆಸಬಹುದು” ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ಕಲೆ ಮತ್ತು ವೈದ್ಯಕೀಯ ಕ್ಷೇತ್ರದ ಸುಂದರ ಸಮನ್ವಯದೊಂದಿಗೆ ಯುವ ಜನತೆಗೆ ಮಾದರಿಯಾಗಿರುವ ಇವರಿಗೆ ಕಲಾಭಿಮಾನಿಗಳು ಹಾಗೂ ಊರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…