ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಶಾಲೆಯ ಶತಮಾನೋತ್ಸವ ಆಚರಣೆಯ ಪೂರ್ವಭಾವಿಯಾಗಿ ಈ ವಿನೂತನ ಕಾರ್ಯಕ್ರಮ ನಡೆಯಲಿದೆ. ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶತಮಾನೋತ್ಸವ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು, ರೋಟರಿ ಕ್ಯಾಂಸ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಸುದ್ದಿ ಸಮೂಹ ಸಂಸ್ಥೆಗಳು ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.
ವಿವಿಧ ಕಾರ್ಯಕ್ರಮಗಳು:
ವೈದ್ಯಕೀಯ ಪರೀಕ್ಷೆಗಳು:
ಪೂ.ಗಂ. 9.30ರಿಂದ ಕೆ.ಎಂ. ಸಿ ಆಸ್ಪತ್ರೆ ಅತ್ತಾವರ, ಮಂಗಳೂರು, ಇಲ್ಲಿನ ತಜ್ಞ ವೈದ್ಯರಿಂದ ಸ್ತ್ರೀರೋಗ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ತಪಾಸಣೆ, ನೇತ್ರ ಪರೀಕ್ಷೆ, ಇಎನ್ ಟಿ, ಎಲುಬು ಸಂಬಂಧಿತ ಪರೀಕ್ಷೆ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ನಡೆಯಲಿದೆ.
ರೋಟರಿ ಕ್ಯಾಂಸ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ನೇತೃತ್ವದಲ್ಲಿ ರಕ್ತದಾನ ಶಿಬಿರ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ವತಿಯಿಂದ ಪೆರ್ಲಂಪಾಡಿ ಅಂಚೆ ಪಾಲಕರಾದ ಪಿ. ರಾಮಕಷ್ಣ ರಾವ್ ಅಂಚೆ ಸೇವೆ ಮಾಹಿತಿ ನೀಡಲಿದ್ದಾರೆ. ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರ ನಡೆಯಲಿದೆ . ಮಧ್ಯಾಹ್ನ 12.30ಕ್ಕೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇದರ ಸುಳ್ಯ ಘಟಕದ ವತಿಯಿಂದ ಅಗ್ನಿ ಅವಘಡ ಸಂದರ್ಭದಲ್ಲಿ ರಕ್ಷಣೆಯ ಪ್ರಾತ್ಯಕ್ಷತೆ.
ಪ್ರತಿ ವರ್ಷವೂ ಶಾಲಾ ಮಕ್ಕಳು ನಡೆಸುತ್ತಿರುವ ಮೆಟ್ರಿಕ್ ಮೇಳ. ಇದರಲ್ಲಿ ಮಕ್ಕಳೇ ತಾವು ತಂದಿರುವ ವಸ್ತುಗಳು, ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಇರುತ್ತದೆ.
ಪೂ.ಗಂ. 11.30 ರಿಂದ ಕಾರ್ಯಕ್ರಮದಲ್ಲಿ ಸುಳ್ಯದ ವೆರೈಟಿ ಎಂಟರ್ ಪ್ರೈಸಸ್ ಇದರ ಲತಾ ಕುಪ್ಪಾಜೆ ಇವರಿಂದ ಸಾಬೂನು ಮತ್ತು ಫಿನಾಯಿಲ್ ತಯಾರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಕಚ್ಚಾ ವಸ್ತುಗಳ ಮಾರಾಟ ವ್ಯವಸ್ಥೆ ಇರುತ್ತದೆ ಮಂಗಳೂರು ಕೃಷಿ ಇಲಾಖೆಯ ಪಿಎಂಎಫ್ ಎಂ ಇ ಯೊಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಉದ್ಯಮಶೀಲತಾ ಮಾಹಿತಿ ನೀಡಲಿದ್ದಾರೆ.ಮಧ್ಯಾಹ್ನ 1ಗಂಟೆಯಿಂದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ಕಾರ್ಯಕ್ರಮಕ್ಕೆ ಸಹಯೋಗ ನೀಡುವ ಸಂಸ್ಥೆಗಳು :
ಯುವಕ ಮಂಡಲ (ರಿ.) ಕೊಳ್ಳಿಗೆ ಪೆರ್ಲಂಪಾಡಿ, ಮರಾಠಿ ಸಮಾಜ ಸೇವಾ ಸಂಘ ಮತ್ತು ಮರಾಠಿ ಮಹಿಳಾ ಘಟಕ ಗ್ರಾಮ ಸಮಿತಿ ಕೊಳ್ತಿಗೆ ಪೆಲ೯ಂಪಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ.ಬಿ.ಸಿ ಒಕ್ಕೂಟಗಳು, ಮಧುರ ಹಿರಿಯ ವಿದ್ಯಾರ್ಥಿ ಸಂಘ ಸಬ್ಬಡ್ಕ, ದುಗ್ಗಳ ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟ, ಪೆರ್ಲಂಪಾಡಿ,
ಆದಿಶಕ್ತಿ ಮಹಿಲಾ ಮಂಡಲ ಪೆರ್ಲಂಪಾಡಿ ಲೋಕ ವಿಕಾಸ ಪ್ರತಿಷ್ಠಾನ ರಿ. ಪೆರ್ಲಂಪಾಡಿ ಇವರು ಸಹಕಾರ ನೀಡಲಿದ್ದಾರೆ.
ಪರ ಊರಿನಲ್ಲಿ ಇದ್ದವರ ಮಾಹಿತಿ:
ಪುತ್ತೂರು ಸುದ್ದಿ ಪತ್ರಿಕೆ ವತಿಯಿಂದ ಪರ ಊರಿನಲ್ಲಿ ಇರುವ ಕೊಳ್ತಿಗೆ ಗ್ರಾಮದವರ ಮಾಹಿತಿ ಸಂಗ್ರಹ ನಡೆಯಲಿದೆ. ಪೂ. 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಶಾಲಾ 1942 ಬ್ಯಾಚ್ ನ ಹಿರಿಯ ವಿದ್ಯಾರ್ಥಿ ಕೂಸಣ್ಣ ಗೌಡ ಕುದುಳಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಎಕ್ಕಡ್ಕ ವಹಿಸಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ.ಶಿವಾನಂದ, ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಶಿಶು ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷಪ್ರಸಾದ್ ಎಲ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯ ಗುರುಗಳಾದ ಗಂಗಾಧರ ನಾಯ್ಕ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೀರಪ್ಪ ಗೌಡ ದುಗ್ಗಳ, ಕಟ್ಟಡ ಸಮಿತಿ ಅಧ್ಯಕ್ಷ ಪ್ರಮೋದ್ ಕೆ ಎಸ್, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪವನ್ ಡಿ ಜಿ ದೊಡ್ಡಮನೆ ತಿಳಿಸಿದ್ದಾರೆ.