ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಬಜ್ಪೆ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಜಂಟಿ ಆಶ್ರಯದಲ್ಲಿ ಮುಲ್ಕಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ದಿನಾಂಕ 23-09-2026 ರಂದು ನಡೆಯಿತು.
ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದ ಬಜ್ಪೆಯ ಕ್ರೃಪಾಸಾಧನ ಸೆಮಿನರಿಯ ಆತ್ಮಿಕ ನಿರ್ದೇಶಕರಾದ ವಂದನೀಯ ಫಾ ಕೆವಿನ್ ಲಾರೆನ್ಸ್ ಡಿಸೋಜ ಅವರು ಕ್ರೀಡಾ ಸ್ಫೂರ್ತಿಯಿಂದ ಆಡಿ ಮನೋದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಾಂಪೈ ಪದವಿ ಪೂರ್ವ ಕಾಲೇಜು, ಐಕಳ ಇಲ್ಲಿನ ನಿವ್ರತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಆಲ್ವಿನ್ ಮಿರಾಂದ ಮುಖ್ಯ ಅತಿಥಿಗಳಾಗಿ ಸಂದೇಶ ನೀಡಿದರು. ಪ್ರಭಾರ ಪ್ರಾಂಶುಪಾಲರು ಸ್ವಾಗತಿಸಿದರು. ವೇದಿಕೆಯಲ್ಲಿ ಕಟೀಲು ಎಸ್ಡಿಪಿಟಿ ಪ. ಪೂ. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಶಶಿಧರ್ ಮಾಣಿ ಮತ್ತು ಪಾಂಪೈ ಪ. ಪೂ. ಕಾಲೇಜಿನ ಶ್ರೀ ಸಿಜಿ ಪೆರುಮಾಯನ್ ಇವರು ಉಪಸ್ಥಿತರಿದ್ದರು . ಆತಿಥೇಯ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಅರುಣ್ ಡಿಸೋಜ ಅವರು ಕ್ರೀಡಾ ಕೂಟದ ನೇತೃತ್ವ ವಹಿಸಿದ್ದರು.
ಮುಲ್ಕಿ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರು ಮತ್ತು ಬಾಲಕರ ವಿಭಾಗದಲ್ಲಿ ಎಂಟು ಮತ್ತು ಬಾಲಕಿಯರ ವಿಭಾಗದಲ್ಲಿ ಐದು ತಂಡಗಳು ಭಾಗವಹಿಸಿದ್ದರು.

ಅಂತಿಮವಾಗಿ ಬಾಲಕರ ವಿಭಾಗದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಪದವಿ ಪೂರ್ವ ಕಾಲೇಜು, ಕಟೀಲು ಹಾಗೂ ಬಾಲಕಿಯರ ವಿಭಾಗದಲ್ಲಿ ವಿಜಯ ಕಾಲೇಜು ಮುಲ್ಕಿ ವಿಜಯಿಗಳಾದರು.
ದ್ವಿತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ವಿಜಯ ಕಾಲೇಜು, ಮುಲ್ಕಿ ಮತ್ತು ಬಾಲಕಿಯರ ವಿಭಾಗದಲ್ಲಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ಬಜ್ಪೆ ಅಲಂಕರಿಸಿದರು.