ದ ಕ ಜಿ ಪಂ ಹಿ ಪ್ರಾ ಶಾಲೆ ಮುಲ್ಲಕಾಡು ಕಾವೂರು ಮಂಗಳೂರು ಇಲ್ಲಿ ದಿನಾಂಕ 10.07.2026 ರಂದು ಸರಕಾರಿ ಶಾಲೆಯಲ್ಲಿ ನೂತನವಾಗಿ ಎಲ್ ಕೆ ಜಿ( LKG) ತರಗತಿ ಪ್ರಾರಂಭವಾಯಿತು. ಯಾವುದೇ ಪ್ರವೇಶಾತಿ ಶುಲ್ಕ ಇಲ್ಲದೆ ಸಂಪೂರ್ಣವಾಗಿ ಉಚಿತವಾಗಿರಲಿದೆ. ಎಲ್ ಕೆ ಜಿ ತರಗತಿಗಾಗಿ ಒಬ್ಬ ಶಿಕ್ಷಕರು ಒಬ್ಬ ಆರೈಕೆದಾರಳನ್ನು ನೇಮಕ ಮಾಡಲಾಗಿದೆ.

ಈ ಸರಳ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಲಯದ ಕೇತ್ರಶಿಕ್ಷಣಾಧಿಕಾರಿಗಳಾದ ಜೇಮ್ಸ್ ಕೊಟಿನ಼್, ಶಾಲಾ ಶಿಕ್ಷಣ ತಜ್ಜರಾದ ಗಿರಿಜಾತೆ ಆರ್ ಭಂಡಾರಿ ನಿಕಟ ಪೂರ್ವ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗಾಯತ್ರಿ ಆರ್ ರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ದೀಪಕ್ ಪೂಜಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಾದ ಜಿ ಉಸ್ಮಾನ್ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ಎ ಎಸ್ ವೀಣಾ ಇವರು ಉಪಸ್ಥಿತಿರಿದ್ದರು.

ಮುಲ್ಲಕಾಡು ಶಾಲೆಯು ಈ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರತಿ ವರ್ಷ ವಿದ್ಯಾರ್ಥಿಗಳು ಸಂಖ್ಯೆ ಹೆಚ್ಚಿಸಿಕೊಂಡು ಸುಮಾರು 350 ಮಕ್ಕಳು ಇಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ನೆರೆದ ಗಣ್ಯರು ಅಕ್ಷರಾಭ್ಯಾಸ ನಡೆಸಿ ಮಕ್ಕಳಿಗೆ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಿಸಿದರು.