ಕಕ್ಯಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಜೂನ್ 01 ರಂದು ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಶಿವಾನಿ ಹಾಗೂ ಟ್ರಸ್ಟಿ ಶ್ರೀಯುತ ಯಜ್ಞೆಶ್ ರಾಜ್ , ಪ್ರಾಂಶುಪಾಲರಾದ ಶ್ರೀಯುತ ಜೋಸ್ಟನ್ ಲೋಬೊ, ಸಂಯೋಜಕರಾದ ಯಶವಂತ್ ಜಿ ನಾಯಕ್, ಮುಖ್ಯ ಶಿಕ್ಷಕಿಯಾದ ಶ್ರೀಮತಿ ವಿಜಯ ಕೆ ಹಾಗೂ ಶಿಕ್ಷಕ ವೃಂದದವರು ವಿಜೃಂಭಣೆಯಿಂದ ಮಕ್ಕಳನ್ನು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ನೀಡಿ ಶುಭಾಶಯಗಳನ್ನು ತಿಳಿಸಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಾರೈಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ನಡತೆ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಶಾಲಾ ಪ್ರಾರಂಭೋತ್ಸವ ಸಂಭ್ರಮ, ಸಂತೋಷ ಮತ್ತು ಹೊಸ ಕನಸುಗಳಿಂದ ತುಂಬಿಕೊಂಡಿತ್ತು. ಪುಟ್ಟ ಮಕ್ಕಳ ನಗುವು, ಶಿಕ್ಷಕರ ಆತ್ಮೀಯ ಸ್ವಾಗತ, ಪೋಷಕರ ಉತ್ಸಾಹ ಮತ್ತು ಶಾಲೆಗಳ ಹಬ್ಬದ ವಾತಾವರಣ ಎಲ್ಲರ ಮನಸೆಳೆಯಿತು. ಹೊಸ ಪುಸ್ತಕಗಳ ಸುವಾಸನೆ, ಹೊಸ ಬ್ಯಾಗ್‌ಗಳ ಖುಷಿ ಮತ್ತು ಸ್ನೇಹಿತರ ಜೊತೆಗಿನ ಮೊದಲ ದಿನದ ಸಂಭ್ರಮ ಮಕ್ಕಳ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತು. ಶಿಕ್ಷಣದ ಮೂಲಕ ಪ್ರತಿಯೊಂದು ಮಗುವಿನ ಭವಿಷ್ಯ ಬೆಳಗಲಿ ಎಂಬ ಆಶಯದೊಂದಿಗೆ ಈ ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.