ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆ (NSS) ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ. ವಹಿಸಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶಂಕರ್ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, “NSS – From Service to Leadership, From Leadership to Change” ಎಂಬ ಆಶಯದೊಂದಿಗೆ ಪ್ರೇರಣಾದಾಯಕವಾಗಿ ಮಾತನಾಡಿದರು.

NSSನ ಇತಿಹಾಸ, “Not Me But You” ಎಂಬ ಧ್ಯೇಯವಾಕ್ಯದ ಮಹತ್ವ, ಸಮಾಜ ಸೇವೆಯ ಅಗತ್ಯತೆ, ಯುವಶಕ್ತಿಯ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳು ಕೇವಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಾಗದೆ ಸಮಾಜದಲ್ಲಿ ಬದಲಾವಣೆ ತರುವ Change Makers ಆಗಬೇಕು ಎಂಬ ಸಂದೇಶವನ್ನು ಅವರು ನೀಡಿದರು.

ಕಾರ್ಯಕ್ರಮದಲ್ಲಿ NSS ಕಾರ್ಯಕ್ರಮ ಅಧಿಕಾರಿ ದಿನೇಶ್ ಗೌಡ ಯು., ಸಹ ಕಾರ್ಯಕ್ರಮ ಅಧಿಕಾರಿ ಶ್ರಾವ್ಯ ಎಸ್. ಉಪಸ್ಥಿತರಿದ್ದರು.

NSS ಘಟಕ ನಾಯಕ ಕೈಲಾಶ್ ಸ್ವಾಗತಿಸಿದರು. ಘಟಕ ನಾಯಕಿ ಇಂದುಮತಿ ವಂದಿಸಿದರು. ಸ್ವಯಂಸೇವಕಿ ಆಶೀತಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ NSS ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

“Wisdom Session” Empowering Students at Vani College: A Rovers and Rangers Initiative

Belthangady, August 8, 2024 : The Rovers and Rangers unit of Vani…

Celebration of 25th Kargil Vijay Diwas at Vani PU College

Belthangady, 26th July 2024: Vani Pre University College’s NSS unit marked the…

Sri Gurudeva PU College Belthangady Inaugurates Rovers and Rangers Bangera Unit

Belthangady, August 14, 2024 : Sri Gurudeva PU College proudly announces the…