ಬಜ್ಪೆಯ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ದೇಶದ 80ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ದಿನಾಂಕ 15-08-2026 ರಂದು ಬೆಳಿಗ್ಗೆ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರೂ, ಸಭಾಧ್ಯಕ್ಷರೂ ಆಗಿರುವ ವಂದನೀಯ ಫಾ. ಆಂಡ್ರೂ ಡಿಸೋಜ ಅವರು ದೇಶಪ್ರೇಮವನ್ನು ಬೆಳೆಸಿಕೊಂಡು, ಜವಾಬ್ದಾರಿಯುತ ನಾಗರಿಕರಾಗುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.

ಸ್ಥಳೀಯ ಕ್ರೃಪಾಸಾಧನ ಸೆಮಿನರಿಯ ಆತ್ಮಿಕ ನಿರ್ದೇಶಕರಾದ ವಂದನೀಯ ಫಾ. ಕೇವಿನ್ ಲಾರೆನ್ಸ್ ಡಿಸೋಜ ಮುಖ್ಯ ಅತಿಥಿಗಳಾಗಿ ಸಂದೇಶ ನೀಡಿದರು. ಬಜ್ಪೆ ಇಗರ್ಜಿಯ ಸಹಾಯಾಕ ಧರ್ಮ ಗುರುಗಳಾದ ವಂದನೀಯ ಫಾ. ವಿಜಯ್ ಮೊಂತೇರೊ, ಪ್ಯಾರಿಷ್ ಕೌನ್ಸಿಲ್ ಉಪಾಧ್ಯಕ್ಷರಾದ ಶ್ರೀ ವಿಲಿಯಂ ಸಿರಿಲ್ ಲೀವಿಸ್, ಪದವಿಪೂರ್ವ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ರಾಣಿ ಶೆಣೈ, ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಶಾರ್ಲೆಟ್ ಡಿಸೋಜ, ಅಮ್ಮಂದಿರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಿಡ್ವಿನ್ ಕಾರ್ಮಿನ್ ಡಿಕೋಸ್ತ ಉಪಸ್ಥಿತರಿದ್ದರು.

ಪ್ರಭಾರ ಪ್ರಾಂಶುಪಾಲರು ಸ್ವಾಗತಿಸಿದರು ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಆಲ್ವಿನ್ ಅರುಣ್ ಡಿಸೋಜ ವಂದಿಸಿದರು. ಪದವಿಪೂರ್ವ ವಿಭಾಗದ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಅರುಣ್ ಡಿಸೋಜ ಸಂಯೋಜಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಅಪರ್ಣಾ ನಿರ್ವಹಿಸಿದರು. ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗಗಳ ಉಪನ್ಯಾಸಕರು, ಸಹಶಿಕ್ಷಕರು, ಕಛೇರಿ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಂಸ್ಥೆಯ ಹಿತೈಷಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…