ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ವತಿಯಿಂದ ನಡೆಯುತ್ತಿರುವ ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳು ದಿನಾಂಕ 10-04-2026 ರಂದು ಅಕ್ಷಯ ಕಾಲೇಜ್, ಪುತ್ತೂರಿನಲ್ಲಿ ನಡೆದ “ಕೃತ್ವ 2026” ರಾಷ್ಟ್ರೀಯ ಮಟ್ಟದ ಫೆಸ್ಟ್ ನಲ್ಲಿ ಭಾಗವಹಿಸಿ,
ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ನವ್ಯ “ಕವನ ವಾಚನ”ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರು ಸಂಯೋಜಕರು ಮತ್ತು ಎಲ್ಲಾ ಉಪನ್ಯಾಸಕರು ಅಭಿನಂದಿಸಿದರು.