ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ).ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿ ನ ಪದವಿಪೂರ್ವ ವಿಭಾಗದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ಮತ್ತು ವ್ಯಸನ ನಿವಾರಣೆ ಮತ್ತು ನಿಯಂತ್ರಣ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲಗಳ ವ್ಯಕ್ತಿಯಾಗಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಯಾದ ಶ್ರೀ ಮತಿ ವಿಂದ್ಯಾಶ್ರೀ.ಎ ಮಾತನಾಡಿ ಭವಿಷ್ಯದ ಆಶಾಕಿರಣ ಯುವಜನತೆಯನ್ನು ಆವರಿಸಿಕೊಂಡಿರುವ ಮಾದಕ ದ್ರವ್ಯ ಗಳು ಒಂದು ಗಂಭೀರ ಹಾಗೂ ಜಾಗತಿಕ ಸಮಸ್ಯೆ ಯಾಗಿ ಹೊಸ ಪಿಡುಗುಗಳಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡುಸುತ್ತಿರುವುದು ನಿಜಕ್ಕೂ ಆತಂಕಕಾರಿ ಹಾಗೂ ನಾವೆಲ್ಲರೂ ಒಟ್ಟಾಗಿ ಸಮಾಜವನ್ನು ಸಬಲೀಕರಣಗೊಳಿಸೋಣ, ಮಾದಕ ದ್ರವ್ಯಗಳನ್ನು ತ್ಯಜಸೋಣ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸೋಣ ಎಂದು ಕರೆ ನೀಡಿದರು ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.

ವಿದ್ಯಾಸಂಸ್ಥೆಯ ಸಂಯೋಜಕರಾದ ಶ್ರೀಯುತ ಯಶವಂತ್ ಜಿ ನಾಯಕ್, ಪದವಿ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ದೀಕ್ಷಿತಾ , ಪದವಿ ಪೂರ್ವ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಸೌಮ್ಯ ಎನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…