ಕಕ್ಯಪದವು: ಜುಲೈ 28ರಂದು ಪಿ.ಎಂ. ಶ್ರೀ ಸರಕಾರಿ ಪ್ರೌಢಶಾಲೆ ದಡ್ಡಲಕಾಡು ಇಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಎಲ್. ಸಿ. ಆರ್. ಇಂಡಿಯನ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸ್ಪರ್ಧೆಯಲ್ಲಿ ಆರನೇ ತರಗತಿಯ ತಂಜಿಳ್ ಅಹಮದ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುತ್ತಾನೆ. ಹಾಗೂ ರಿಷಿಕಾ ಮತ್ತು ದಿಶಾ. ವೈ. ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ಶ್ರೀಯುತ ಅಶೋಕ್ ಆಚಾರ್ಯ ತರಬೇತಿ ನೀಡಿರುತ್ತಾರೆ.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಸಂಯೋಜಕರಾದ ಯಶವಂತ್ ಜಿ ನಾಯಕ್ ಹಾಗೂ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ವಿಜಯ. ಕೆ. ಇವರು ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಇದೇ ರೀತಿ ಸಾಧನೆ ಮಾಡುವಂತೆ ಶುಭ ಹಾರೈಸಿದರು.