ದೇಶಭಕ್ತಿಯ ಗಾನಕ್ಕೆ ಗೆಲುವಿನ ಗರಿ!

ಕಕ್ಯಪದವು: ಸೆಪ್ಟೆಂಬರ್ 12ರಂದು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವಾಮದಪದವು ಇವರು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಎಲ್. ಸಿ. ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಸ್ಕೌಟ್ಸ್, ಕಬ್ಸ್ ಹಾಗೂ ಬುಲ್ ಬುಲ್ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಮತ್ತು ಗೈಡ್ಸ್ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸ್ಕೌಟ್ ವಿಭಾಗದಲ್ಲಿ 7ನೇ ತರಗತಿಯ ರಕ್ಷಣ್,ನಮನ್ ಸಿ ಶೆಟ್ಟಿ, ಸಮರ್ಥ್ ಕೆ, ಧನ್ವಿತ್ ಪಿ ಗೌಡ, ಅಭಿನವ್ ಎಂ ಪ್ರಭು, ಅಧ್ಯನ್ ಗೌಡ ಮತ್ತು ಕಬ್ಸ್ ವಿಭಾಗದಲ್ಲಿ 4ನೇ ತರಗತಿಯ ಲಿಖಿತ್ ಚಂದ್ರ, ಧನ್ವಿತ್ ಆಳ್ವ,ಶಿವಾಂಶ್ ಶೆಟ್ಟಿ, ಅಭಿನವ್ ಚಂದ್ರ ನಾಯಕ್, ಮಹಮ್ಮದ್ ಹಿಷಾಮ್ ಕೆ, ಸಾತ್ವಿಕ್ ಎಸ್ ಮತ್ತು ಬುಲ್ ಬುಲ್ ವಿಭಾಗದಲ್ಲಿ 4ನೇ ತರಗತಿಯ ಚಾರ್ವಿ ಎಂ ಡಿ, ರಿಫಾ ಫಾತಿಮಾ, ಸಮೀಕ್ಷಾ ಎಸ್ ಪೂಜಾರಿ, ಅವೀಕ್ಷಾ ಆರ್ ಪಿ, ಪಾಯಲ್ ಡಿ ಎಂ, ಸುಹಾನಿ ಇವರು ಪ್ರಥಮ ಸ್ಥಾನ ಗಳಿಸಿದ್ದು ಹಾಗೂ ಗೈಡ್ಸ್ ವಿಭಾಗದಲ್ಲಿ 7ನೇ ತರಗತಿಯ ಸಮನ್ವಿ ಆರ್. ಕೆ, ಕೆ ಖುಷಿ, ಆದ್ಯ ವಿ ಜಿ, ಮುಫೀದಾ, ಹಿಭಾ ಫಾತಿಮಾ, ತನುಷ್ಕಾ ಇವರು ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ,ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ಯಾದ ಶ್ರೀಮತಿ ವಿಜಯ ಕೆ ಇವರು ಅಭಿನಂದಿಸಿ ಇದೇ ರೀತಿ ಜಿಲ್ಲಾ ಮಟ್ಟದಲ್ಲೂ ಸಾಧನೆ ಮಾಡುವಂತೆ ಶುಭ ಹಾರೈಸಿರುತ್ತಾರೆ .

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…