ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್(ರಿ).ನಿಂದ ನಡೆಸಲ್ಪಡುವ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ದಿನಾಂಕ 19.8.2026 ರಂದು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ತಾಂತ್ರಿಕ ಜ್ಞಾನ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ “ನೆಕ್ಸ್ಟ್ ಲನ್೯” ವತಿಯಿಂದ ನೆಕ್ಸ್ಟ್ ಲನ್೯ ಟೆಕ್ನಾಲಜೀಸ್‌ನ ಮುಖ್ಯಸ್ಥ ರಾದ ಸತೀಶ್ ಇವರ ನೇತೃತ್ವದಲ್ಲಿ ವೆಬ್‌ಸೈಟ್ ನಿರ್ಮಾಣ ಕಲಿಕೆಯ ಕುರಿತು ಒಂದು ತಿಂಗಳ ಉಚಿತ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ ಚಾಲನೆ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸಿಬಾನಿ ಪಾಂಡಿಯವರು ಭಾಗವಹಿಸಿ ಈ ತರಬೇತಿಯ ಮುಖ್ಯ ಉದ್ದೇಶ ವೆಬ್‌ಸೈಟ್ ನಿರ್ಮಾಣದ ಮೂಲಭೂತ ಅಂಶಗಳನ್ನು ಪರಿಚಯಿಸುವುದು ಹಾಗೂ ಆಧುನಿಕ ವೆಬ್‌ಸೈಟ್‌ಗಳನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡುವ ಕುರಿತು ಕಾರ್ಯಕ್ರಮದಲ್ಲಿ ವೆಬ್ ಡೆವಲಪ್‌ಮೆಂಟ್ ಕ್ಷೇತ್ರದ ಪ್ರಮುಖ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಲಾಯಿತು.

ತರಬೇತಿಯ ಸಂದರ್ಭದಲ್ಲಿ HTML, CSS ಮತ್ತು JavaScript ಬಳಸಿ ವೆಬ್‌ಸೈಟ್‌ನ ರಚನೆ, ವಿನ್ಯಾಸ ಮತ್ತು ಕಾರ್ಯನಿರ್ವಹಣೆಯನ್ನು ಕಲಿಸಲಾಯಿತು. ಜೊತೆಗೆ React Framework ಮೂಲಕ ಆಧುನಿಕ ಹಾಗೂ ಸಂವಾದಾತ್ಮಕ ಬಳಕೆದಾರ ಸಂಪರ್ಕ ವ್ಯವಸ್ಥೆಗಳನ್ನು ನಿರ್ಮಿಸುವ ಕುರಿತು ತಿಳಿಸಲಾಯಿತು. ದತ್ತಾಂಶ ನಿರ್ವಹಣೆ ಹಾಗೂ ವೆಬ್‌ಸೈಟ್‌ನೊಂದಿಗೆ ಡೇಟಾಬೇಸ್ ಸಂಪರ್ಕಿಸುವ ವಿಧಾನವನ್ನು ಪರಿಚಯಿಸಲಾಯಿತು. ಅಲ್ಲದೆ, ವೆಬ್‌ಸೈಟ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ Deployment ಮತ್ತು Hosting ವಿಧಾನಗಳ ಬಗ್ಗೆಯೂ ತರಬೇತಿ ನೀಡಲಾಯಿತು.

ಈ ಕಾರ್ಯಕ್ರಮವು ಉಚಿತವಾಗಿದ್ದು, ಯಾವುದೇ ಕೋರ್ಸ್ ಶುಲ್ಕವಿಲ್ಲದೆ ಒಂದು ತಿಂಗಳ ಅವಧಿಯಲ್ಲಿ ಉಪಯುಕ್ತ ಕೌಶಲ್ಯವನ್ನು ಕಲಿಯುವ ಅವಕಾಶವನ್ನು ಒದಗಿಸಿತು. ವಿದ್ಯಾರ್ಥಿಗಳಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು.

ಒಟ್ಟಾರೆಯಾಗಿ, ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯವನ್ನು ವೃದ್ಧಿಸುವುದರ ಜೊತೆಗೆ ವೆಬ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಿತು. ಇಂತಹ ಉಚಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಯುವಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಯಿತು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…