ಕಕ್ಯಪದವು, 29 ಜುಲೈ 2026: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು, ಇಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಂಟಿ ಆಶ್ರಯದಲ್ಲಿ “ತುಳುವರ ಬದುಕಿನ ಅನಾವರಣ” ಎಂಬ ಪರಿಕಲ್ಪನೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ ತರಗತಿವಾರು ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಯುತ ಯತೀಶ್ ಬೈಕಂಪಾಡಿ, ಅಧ್ಯಕ್ಷರು ದಕ್ಷಿಣ ಕನ್ನಡ ಈಜು ಸಂಘ, ಇವರು ದೀಪ ಬೆಳಗಿಸಿ, ಕೃಷಿ ಸಂಸ್ಕೃತಿಯನ್ನು ಸಾರುವ ನೇಜಿ ನೆಡುವ ಮೂಲಕ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಆಟಿಕಳೆಂಜನ ಕುಣಿತದೊಂದಿಗೆ “ಆಟಿ ಕೂಟ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಮಾತುಗಳನ್ನಾಡಿದ ಶ್ರೀಯುತ ಯತೀಶ್ ಬೈಕಂಪಾಡಿ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿ ಹೇಳಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಹೊರಬರಲು ಅವಕಾಶಗಳಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಬಬಿತಾ ಆರ್ ನಾಥ್ ಹಾಗೂ ಕಾರ್ಯದರ್ಶಿ ಶಿವಾನಿ ಆರ್ ನಾಥ್, ಟ್ರಸ್ಟಿಗಳಾದ ಯಜ್ಞೇಶ್ ರಾಜ್, ಗ್ರಾಮ ಪಂಚಾಯತ್ ನ ಸುರೇಶ್ ಮೈರಾ, ವಸಂತ್ ರಾಮನಗರ, ಸ್ಥಳೀಯ ರಾದ ಉದ್ಯಮಿ ರಾಮಪ್ಪ ಪೂಜಾರಿ, ಹರಿಶ್ಚಂದ್ರ ಪೂಜಾರಿ ಕೇರ್ಯ, ಗುರುಪ್ರಕಾಶ್ ಕೊರಡಿಂಗೇರಿ, ವಿಶ್ವನಾಥ ಸಾಲಿಯನ್ ಬಿತ್ತ, ಅಕ್ಬರ್ ಆಲಿ ಸಹಶಿಕ್ಷಕರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಉಳಿಬೈಲು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ವಿಭಾಗ, ಪದವಿ ಹಾಗೂ ಪದವಿಪೂರ್ವ, ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಸಮೂಹ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತುಳುನಾಡಿನ ಕಲೆ, ಸಂಸ್ಕೃತಿ, ಜೊತೆಗೆ ಆಟಿ ತಿಂಗಳ ವಿಶೇಷತೆಯನ್ನು ತಿಳಿಸುವ ಗಾದೆ ಮಾತುಗಳು, ಆಹಾರ ಪದ್ಧತಿಗಳು, ಗಿಡಮೂಲಿಕೆಗಳು ಹಾಗೂ ತುಳುವರ ಬದುಕು ಮುಂತಾದ ಪ್ರಮುಖ ಅಂಶಗಳೊಂದಿಗೆ ಸಂಪ್ರದಾಯಿಕ ಉಡುಗೆ ಧರಿಸಿ ತುಳುನಾಡಿನ ಕಥೆ, ಹಾಡು, ನೃತ್ಯದೊಂದಿಗೆ ಮನರಂಜನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ , ಸಂಯೋಜಕರಾದ ಯಶವಂತ್ ಜಿ.ನಾಯಕ್ ಪ್ರಾಥಮಿಕ ಮತ್ತು ಪೌಢ ವಿಭಾಗದ ಮುಖ್ಯಶಿಕ್ಷಕಿ ವಿಜಯಾ.ಕೆ, ದೈಹಿಕ ಶಿಕ್ಷಕಿ ಹರಿಣಾಕ್ಷಿ ಜಿ.ಕೆ , ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೋಧಕ ಹಾಗೂ ಬೋಧಕೇತರವೃಂದ ಮತ್ತು ಪೋಷಕ ವೃಂದದವರು,ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಪ್ರೌಢಶಾಲಾ ವಿಭಾಗದ ಸಹಶಿಕ್ಷಕರಾದ ಸೌಮ್ಯ ಕೆ ಆಟಿ ತಿಂಗಳ ಮಹತ್ವದ ಬಗ್ಗೆ ಹೇಳಿದರು.
ಪ್ರೌಢಶಾಲಾ ವಿಭಾಗದ ಸಹಶಿಕ್ಷಕಿ ತೀರ್ಥಲತಾ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಸಹಶಿಕ್ಷಕಿ ಪ್ರತಿಮಾ ವಂದಿಸಿ, ಸಹಶಿಕ್ಷಕರಾದ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.