ದಿನಾಂಕ 14/11/2024 ಮತ್ತು 15/11/2024 ರಾಂದು ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಜಾಂಪ್ ರೋಪ್ ಪಂದ್ಯಾಟದಲ್ಲಿ ಎಡಪದವು ಸ್ವಾ ಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.
ಬಾಲಕರ ವಿಭಾಗದಲ್ಲಿ ಆಕಾಶ್ , ಮಿಥುನ್ , ಮತ್ತು ಜಗದೀಶ ಪ್ರಥಮ ಸ್ಥಾನ ಹಾಗು ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಥಮ ಚಾಂಪಿಯನ್ ಶಿಪ್ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕಾವ್ಯ , ಬಬಿತಾ ದ್ವಿತೀಯ ಸ್ಥಾನ ಹಾಗು ಶೃತಿ, ಮೋಹಿನಿ , ನಿರೀಕ್ಷ, ಪ್ರಥಮ ಸ್ಥಾನ ಪಡೆದಿದ್ದಾರೆ ಮತ್ತು ಹುಲಗಮ್ಮ , ಯತೀಕ್ಷ ಭಾಗವಹಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಸಮಗ್ರ ತೃತೀಯ ಚಾಂಪಿಯನ್ ಶಿಪ್ ಪಡೆದಿದ್ದಾರೆ . ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತರಬೇತಿ ನೀಡಿದ ಶ್ರೀ ಪ್ರೇಮನಾಥ್ ಶೆಟ್ಟಿ ದೈಹಿಕ ಶಿಕ್ಷಣ ಉಪನ್ಯಾಸಕರು ಮತ್ತು ಆಡಳಿತ ಅಧಿಕಾರಿ, ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.