ಎಡಪದವು, 19 ಅಕ್ಟೋಬರ್ 2024: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಹಾಗು ಸ್ವಾಮಿ ವಿವೇಕಾನಂದ ಪದವಿಪೂರ್ವ ಇವರ ಸಂಯುಕ್ತ ಆಶ್ರಯದಲ್ಲಿ ಮುಲ್ಕಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಡೆದೆದಿದ್ದು ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಇವರು ನಮ್ಮ ದೇಶದ ಅಭಿವೃದ್ಧಿ ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲ ಶಾರೀರಿಕ ಮಾನಸಿಕ ದೃಷ್ಟಿಯಿಂದಲೂ ಅತ್ಯಂತ ಕ್ರೀಡೆ ಮುಖ್ಯವಾಗಿದೆ.

ಈ ಪರಂಪರೆಯಲ್ಲಿ ಕ್ರೀಡೆಗಳ ಪಾತ್ರ ಅತಿ ಮುಖ್ಯವಾಗಿದೆ. ಕ್ರೀಡೆಗಳು ನಮ್ಮ ಜೀವನದ ಅವಶ್ಯಕ ಅಂಗವಾಗಿ ಪರಿಣಮಿಸಿದೆ. ಭೋಧನೆಯೊಂದಿಗೆ ಶ್ರೇಷ್ಠ ಶಾರೀರಿಕ ಆರೋಗ್ಯ ಶಿಸ್ತಿನ ಅಭ್ಯಾಸ ಮತ್ತು ಸೃಜನಾತ್ಮಕ ಚಿಂತನೆಗಳನ್ನು ಬೆಳೆಸಲು ಕ್ರೀಡೆಗಳು ಮಹತ್ವದ ಸಾಧನೆಗಳಾಗಿವೆ ಎಂದು ಅಧ್ಯಕ್ಷೀಯ ನುಡಿಗಳನ್ನು ಆಡಿದರು.

ಆಡಳಿತಾಧಿಕಾರಿ ಮತ್ತು ದೈಹಿಕ ಶಿಕ್ಷನ ಉಪನ್ಯಾಸಕರಾದ ಶ್ರಿಯುತ ಪ್ರೇಮನಾಥ್ ಶೆಟ್ಟಿ ವಿಧ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಮಡು ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಆಶಯ. ಈ ಕಾರ್ಯಕ್ರಮದ ಮೂಲಕ ಹೊಸ ಚುಟುಕು ಹೊಸ ಉತ್ಸಾಹ ಮತ್ತು ಶಕ್ತಿಯನ್ನು ಪಡೆಯಲು ಸಚ್ಚಾಗಿದ್ದೇವೆ ಎಂಬ ಪ್ರಸ್ತುವಿಕ ನುಡಿಗಳನ್ನು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ವೇದಿಕೆಯಲ್ಲಿ ಶ್ರೀಯುತ ಅರುಣ್ ಡಿಸೋಜ ಮಾಜಿ ಕ್ರೀಡಾ ಸಂಯೋಜಕರು ದಕ್ಷಿಣಕನ್ನಡ ಮಂಗಳೂರು ಶ್ರೀಯುತ ಆಲ್ವಿನ್ ಮಿಲಿಂಡಾ ದೈಹಿಕ ಶಿಕ್ಷಣ ಉಪನ್ಯಾಸಕರು ಪೊಂಪೈ ಪದವಿ ಪೂರ್ವ ಕಾಲೇಜು ಕೈಕಂಬ ಮತ್ತು ಮೂಲ್ಕಿ ತಾಲೂಕಿನ ಕ್ರೀಡಾ ಕೂಟದ ಸಂಯೋಜಕರು ಆಗಿರುವ ಶ್ರೀಯತ ನಂದನ್ ಮತ್ತು ಪ್ರೌಢ ಶಾಲಾ ವಿಭಾಗದ ಸಹಶಿಕ್ಷಕರದ ಶ್ರೀಯತ ವಾಸು.ಕೆ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.
ಶ್ರೀಮತಿ ಅಮೃತ ಅರ್ಥಶಾಸ್ತ್ರ ಉಪನ್ಯಾಸಕಿ ನಿರೂಪಣೆ, ಶ್ರೀಮತಿ ಅಪರ್ಣ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಸ್ವಾಗತಿಸಿದರು ಮತ್ತು ಶ್ರೀಮತಿ ಪಲ್ಲವಿ ಇತಿಹಾಸ ಉಪನ್ಯಾಸಕಿ ವಂದನಾರ್ಪಣೆ ಮಾಡಿದರು.
17 ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪದವಿ ಪೂರ್ವ ಕಾಲೇಜು ಸುಂಕದಕಟ್ಟೆ, ದ್ವೀತಿಯ ಸ್ಥಾನವನ್ನು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಕಟೀಲು ಪಡೆಯಿತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಕಟೀಲು, ದ್ವೀತಿಯ ಸ್ಥಾನವನ್ನು ಪದವಿ ಪೂರ್ವ ಕಾಲೇಜು ಪೊಂಪೈ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.