ಬ್ರಹ್ಮಾವರ: ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಸ್ತರಣಾ ಚಟುವಟಿಕೆ ಭಾಗವಾಗಿ ಶಿಬಿರಾರ್ಥಿಗಳು ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮನೆ ಭೇಟಿ ನೀಡಿದರು.
ಈ ಸಂದರ್ಭ ಕುಟುಂಬದ ಸದಸ್ಯರಾದ ರೇಖಾ ಶೆಟ್ಟಿ, ಮನೆಯ ಇತಿಹಾಸ ಹಾಗೂ ವಡ್ಡರ್ಸೆಯವರ ಕುರಿತು ಅನುಭವಗಳನ್ನು ಹಂಚಿಕೊAಡರು. ವಡ್ಡರ್ಸೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೊತ್ತಾಡಿ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ಈ ಸಂದರ್ಭ ಶಿಬಿರಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ, ಸಹ ಶಿಬಿರಧಿಕಾರಿಗಳಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಹರೀಶ್ ಕಾಂಚನ್, ರಜತ್ ಬಂಗೇರ, ಸುಹಾಸ್ ಜಟ್ಟಿಮನೆ, ಕಿಶೋರ್ ಕೃಷ್ಣ ಕಾಂಚನ್ ಹಾಗೂ ಕಚೇರಿ ಸಿಬ್ಬಂದಿಗಳಾದ ಸಚಿನ್, ಮಂಜುನಾಥ್ ಕುಲಾಲ್, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.