ಎಡಪದವು : ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ “ಮಿಕ್ಸೆಡ್ ನೆಟ್ ಬಾಲ್ ಚಾಂಪಿಯನ್ಶಿಪ್” ಪಂದ್ಯಾಟದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿಭಾಗದ ಇಬ್ಬರ ವಿದ್ಯಾರ್ಥಿಗಳಾದ ಕುಮಾರಿ ನಿಕಿತಾ ಮತ್ತು ದಿಶಾಂತ್ ಇವರು ದಕ್ಷಿಣ ಕನ್ನಡ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ.

ಇವರಿಗೆ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಪ್ರೇಮನಾಥ್ ಶೆಟ್ಟಿ, ತರಬೇತಿ ನೀಡಿದ್ದರು ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಅಧಿಕಾರಿ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ಪಡಿಸಿದ್ದಾರೆ

1 comment
Cngrts Nikitha????????????