ಪುತ್ತೂರು, 17 ಅಕ್ಟೋಬರ್ 2024: ಸುದಾನ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿ ನಾಯಕ ಅನಿಶ್ ಎಲ್ ರೈ ರವರು ಮಹರ್ಷಿ ವಾಲ್ಮೀಕಿಯವರ ಕಿರು ಪರಿಚಯ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್ ರವರು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ದೀಪಬೆಳಗಿ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಸಹ ಶಿಕ್ಷಕಿ ಶ್ರೀಮತಿ. ಕವಿತಾ ಅಡೂರು ರವರು ಮಹರ್ಷಿ ವಾಲ್ಮೀಕಿಯವರ ಜೀವನ ಚಿತ್ರಣವನ್ನು ಕಥೆಯೊಂದಿಗೆ ವಿವರಿಸುವುದರ ಮೂಲಕ ವಾಲ್ಮೀಕಿ ಜಯಂತಿ ಆಚರಣೆಯಿಂದ ಜೀವನದಲ್ಲಿ ಮೌಲ್ಯಗಳನ್ನು ರಕ್ಷಿಸಿ ಅಳವಡಿಸುವ ಮಹತ್ವವನ್ನು ಸವಿವರವಾಗಿ ಅರ್ಥೈಸಿದರು. ಶಾಲಾ ಲಹರಿ ಸಾಹಿತ್ಯ ಸಂಘವು ಈ ಕಾರ್ಯಕ್ರಮ ಆಯೋಜಿಸಿತ್ತು.