ಕುಂಜಿಬೆಟ್ಟು, 21 ಜೂನ್ 2025: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ 11 ನೇ ಅಂತರಾಷ್ಟ್ರೀಯ ಯೋಗದಿನದ ಪ್ರಯುಕ್ತ ಉಡುಪಿಯ ಐಸಿಎಐ ಶಾಖೆಯ ವತಿಯಿಂದ ಯೋಗದಿನವನ್ನು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಯೋಗ ತರಬೇತುದಾರರಾದ ಸುರತ್ಕಲ್ ನ ಸಿಎ ಅಖಿಲಾ ಶೆಟ್ಟಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಯೋಗಾಸನ ಮಾಡಿಸುವ ಮುಖೇನ ಯೋಗದ ಮಹತ್ವ ಮತ್ತು ಪ್ರಯೋಜನಗಳ ಬಗೆಗೆ ವಿವರಿಸಿದರು.ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಐಸಿಎಐ ಉಡುಪಿಯ ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ ಅರ್ಚನಾ ಮಯ್ಯ ಸ್ವಾಗತಿಸಿದರು, ಕಾರ್ಯದರ್ಶಿ ಸಿಎ ಅಶ್ವಥ್ ಶೆಟ್ಟಿ ವಂದಿಸಿ ನಿರೂಪಿಸಿದರು.