ಉಡುಪಿ, 21 ನವೆಂಬರ್ 2025: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2025-26 ನೇ ಸಾಲಿನ 35ನೇ ವಾರ್ಷಿಕ ಕ್ರೀಡಾಕೂಟವು ಎ.ಎಲ್.ಎನ್ ರಾವ್ ಕ್ರೀಡಾಂಗಣ ಕುಂಜಿಬೆಟ್ಟುವಿನಲ್ಲಿ ಜರಗಿತು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪಿಕ್ಸ್ ಗ್ರಾಮರ್ ಟೆಕ್ನಾಲಜೀಸ್ ಲಿಮಿಟೆಡ್ ಮೀಡಿಯ ಕಂಪನಿಯ ಆಡಳಿತ ಪಾಲುದಾರರಾದ ಶ್ರೀ ಸಂಜಯ್ ಎಂ. ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕಲಿಕೆಯು ಎಷ್ಟು ಮುಖ್ಯವೋ ಅದರ ಜೊತೆಗೆ ಕ್ರೀಡೆಯೂ ಅತೀ ಮುಖ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳುತ್ತಾ ಕಾಲೇಜಿನ ಜೀವನವನ್ನು ಮೆಲಕುಹಾಕಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಚಾರ್ಯ ಶ್ರೀ ರಾಧಾಕೃಷ್ಣ ರಾವ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್ ಉಪಸ್ಥಿತರಿದ್ದರು. ತೃತೀಯ ಬಿಬಿಎ ವಿದ್ಯಾರ್ಥಿಗಳಾದ ಶಶಾಂಕ್ ಆಚಾರ್ಯ ಕ್ರೀಡಾವಿಧಿ ಬೋಧಿಸಿದರು, ರೇಚಲ್ ಸ್ವಾಗತಿಸಿದರು, ಸಿಂಚನ ವಂದಿಸಿದರು, ವರ್ಷಾ ಕಾಮತ್ ತೃತೀಯ ಬಿ.ಕಾಂ ನಿರೂಪಿಸಿದರು.