ಕುಂಜಿಬೆಟ್ಟು,13 ಅಕ್ಟೋಬರ್ 2025: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಪ್ತ ಸಮಾಲೋಚನೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಸೋಮವಾರದಂದು ಜರುಗಿತು.
ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲದ ವಿದ್ಯಾರ್ಥಿ ಆಪ್ತ ಸಮಾಲೋಚಕರಾಗಿರುವ ಡಾ. ರಾಯನ್ ಮಥಾಯಸ್ ವಿದ್ಯಾರ್ಥಿಗಳಿಗೆ ಕೆಟ್ಟ ಸ್ನೇಹಿತರಿಂದ ಆಗುವ ತೊಂದರೆಗಳು, ದುಶ್ಚಟಗಳಿಗೆ ಬಲಿಯಾದವರ ಪರಿಸ್ಥಿತಿಗಳು, ಉಚಿತ – ಅನುಚಿತ ಶಿಸ್ತು – ಅಶಿಸ್ತು ವರ್ತನೆಗಳು ಹೀಗೆ ಹಲವಾರು ಘಟನೆಗಳನ್ನು ನಿದರ್ಶನಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಆಪ್ತ ಸಮಾಲೋಚನೆ ಹಾಗೂ ವ್ಯಕ್ತಿತ್ವ ವಿಕಸನದ ಮಹತ್ವದ ಕುರಿತು ಅರಿವು ಮೂಡಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಆಶಾ ಕುಮಾರಿಯವರು ಅಧ್ಯಕ್ಷತೆ ವಹಿಸಿದ್ದರು.
ಕು. ಆಯಿಷಾ ಪ್ರಥಮ ಬಿಸಿಎ ಕಾರ್ಯಕ್ರಮ ನಿರೂಪಿಸಿದರು.