ಕುಂಜಿಬೆಟ್ಟು, 25 ಜುಲೈ 2025: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಿಬಿಎ, ಬಿಸಿಎ ಮತ್ತು ಬಿ.ಕಾಂ ಪದವಿಗೆ ಪ್ರವೇಶಾತಿ ಪಡೆದ ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಪ್ರ – ಶಿಕ್ಷಣ ಓರಿಯೆಂಟೇಶನ್ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜುಲೈ 25 ರಂದು ಜರಗಿತು.
ಕೆನರಾ ಬ್ಯಾಂಕ್ ನ ನಿವೃತ್ತ ಡಿಜಿಎಂ ಹಾಗೂ ಪ್ರಸ್ತುತ ಮಹಾಲಕ್ಷ್ಮಿ ಕೋ ಆಪರೇಟೀವ್ ಬ್ಯಾಂಕ್ ನ ಸಲಹೆಗಾರರಾಗಿರುವ ಶ್ರೀ ಪ್ರದೀಪ್ ಭಕ್ತರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ಶುಭ ಹಾರೈಸಿ ಪದವಿಯೆನ್ನುವುದು ಕೇವಲ ಅಂಕ ಪಟ್ಟಿಯಲ್ಲ ಸಮಗ್ರ ವಿಕಾಸವಾಗಬೇಕೆಂದರು.
ಸಮಯ ನಿರ್ವಹಣೆ, ಸತತ ಪರಿಶ್ರಮ, ವಿಫಲತೆಗೆ ಹೆದರಬೇಡಿರಿ, ಸ್ಪೂರ್ತಿದಾಯಕ ವಿಚಾರಗಳ ಕಡೆಗೆ ಗಮನ ಹರಿಸಿ, ಬದುಕಿನಲ್ಲಿ ಮೊದಲು ನೀಡಬೇಕಾದ ಆದ್ಯತೆಯನ್ನು ಸದಾ ಸ್ಮರಿಸಿ, ಅಡೆತಡೆಗಳನ್ನು ಸುಟ್ಟು ಮುನ್ನುಗ್ಗಿ ಎಂದು ಹುರಿದುಂಬಿಸಿದರು.
ಬಳಿಕ ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರ (ಎಂ ಎಸ್ ಡಿ ಸಿ)ದ ಪ್ರೊ. ರಾಜಲಕ್ಷ್ಮಿಯವರು ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಕಂಪ್ಯೂಟರ್ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿಗಳ ಕುರಿತು ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯೆ ಪ್ರೊ. ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ನುಡಿಯೊಂದಿಗೆ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ವಂದಿಸಿದರು. ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ್ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.