ಕುಂಜಿಬೆಟ್ಟು, 11 ಅಕ್ಟೋಬರ್ 2025: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಕುಸಲ್ದ ಗೊಬ್ಬಲು 2025’- ಒಂದು ದಿನದ ತುಳು ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ತುಳು ಸಂಸ್ಕೃತಿಯ ವೈಭವವನ್ನು ವಿವರಿಸುತ್ತ ತುಳು ಸಂಸ್ಕೃತಿಯನ್ನು ಅಳವಡಿಸಿಕೊಂಡು ಸುಸಂಸ್ಕೃತರಾಗಲು ಕರೆ ನೀಡುವುದರ ಜೊತೆಗೆ ದಿನನಿತ್ಯದ ಪಾಠ ಪ್ರವಚನಗಳೊಂದಿಗೆ ಇಂತಹ ಉತ್ಸವಗಳ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಬಾಳ್ವೆ, ಶಾಂತಿ, ಸೌಹಾರ್ದತೆಗಳು ಬೆಳೆಯಲು ಕಾರಣವಾಗುವುದಾಗಿ ಹೇಳಿದರು.
ತುಳು ಉತ್ಸವದ ಉಪನ್ಯಾಸಕ ಸಂಯೋಜಕರಾದ ಜಾವೇದ್, ಹರಿಕೇಶವ್, ಚಂದ್ರಶೇಖರ್ ತುಳು ಸಂಸ್ಕೃತಿಯ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರದರ್ಪುನಿ, ಲಗೋರಿ, ಸೊಪ್ಪಾಟ, ಹಗ್ಗ ಜಗ್ಗಾಟ ಮೊದಲಾದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಆನಂದಿಸಿದರು.
ಉಪ ಪ್ರಾಚಾರ್ಯರಾದ ಶ್ರೀ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರಭಾ ಕಾಮತ್, ಹಾಗೂ ಉತ್ಸವ ವಿದ್ಯಾರ್ಥಿ ಸಂಯೋಜಕರಾದ ಸನ್ನಿಧಿ, ಹರಿಕಿಶನ್ ಉಪಸ್ಥಿತರಿದ್ದರು. ಸನ್ನಿಧಿ ಶೆಟ್ಟಿ ತೃತೀಯ ಬಿಬಿಎ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.