ಉಡುಪಿ, 25 ಅಕ್ಟೋಬರ್ 2025: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಬ್ಯಾಟ್ ಆ್ಯಂಡ್ ನೆಟ್ ಚಾಲೆಂಜ್ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಒಂದು ದಿನದ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಕೂಟ ಸಮಾರೋಪಗೊಂಡಿತು.
ವಿದ್ಯಾರ್ಥಿಗಳ ಕ್ರಿಕೆಟ್ ನಲ್ಲಿ ಎಂ.ಜಿ.ಎಂ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು, ವಿವೇಕ ಪದವಿ ಪೂರ್ವ ಕಾಲೇಜು, ಕೋಟ ದ್ವಿತೀಯ ಸ್ಥಾನವನ್ನು ಪಡೆಯಿತು. ವಿದ್ಯಾರ್ಥಿನಿಯರ ಥ್ರೋ ಬಾಲ್ ನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕ ಪ್ರಥಮ ಸ್ಥಾನ ಪಡೆದು, ಮಣಿಪಾಲ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆಯಿತು.
ಕ್ರಿಕೆಟ್ ನಲ್ಲಿ ಕೋಟ ವಿವೇಕ ಪ.ಪೂ ವಿನ ರೋಹನ್ ಗೆ ಅತ್ಯುತ್ತಮ ಬೌಲರ್ ಪ್ರಶಸ್ತಿ, ಎಂ.ಜಿ.ಎಂ ಪ.ಪೂ ವಿನ ಕನೀಶ್ ಅತ್ಯುತ್ತಮ ಬ್ಯಾಟ್ಸಮನ್ ಪ್ರಶಸ್ತಿಯ ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಥ್ರೋ ಬಾಲ್ ನಲ್ಲಿ ಹಿರಿಯಡ್ಕ ಪ.ಪೂ ವಿನ ಮೇಘಾ ಆಲ್ ರೌಂಡರ್, ಶಾಮ್ಯ ಗುಡ್ ರಿಸೀವರ್ ಹಾಗೂ ಮಣಿಪಾಲ ಪ.ಪೂ ವಿನ ಮೀನಾಕ್ಷಿ ಗುಡ್ ಥ್ರೋವರ್ ಪ್ರಶಸ್ತಿಗೆ ಆಯ್ಕೆಯಾದರು.
ಸಮಾರೋಪ ಸಮಾರಂಭದಲ್ಲಿ ಕಾಂಚನ್ ಹುಂಡೈ ಉಡುಪಿಯ ಮಾಲಕರಾದ ಉದ್ಯಮಿ ಶ್ರೀ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಆರೋಗ್ಯಕರ ಜೀವನಕ್ಕೆ ಆಟೋಟಗಳ ಪಾತ್ರ ಅತೀ ಮುಖ್ಯ, ದೇಹ ಫಿಟ್ ಆಗಲು ನಿರಂತರ ಅಭ್ಯಾಸ ತುಂಬಾ ಪಾತ್ರ ವಹಿಸುತ್ತದೆ ಎಂದು ಹೇಳುತ್ತಾ ಅವರ ಕಾಲೇಜು ಜೀವನದ ನೆನಪನ್ನು ಹಂಚಿಕೊಂಡರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ದೈಹಿಕ ಶಿಕ್ಷಣದ ಉಪನ್ಯಾಸಕರು ಹಾಗೂ ಸ್ಪರ್ಧಿಗಳು ಪಂದ್ಯಕೂಟದ ಅನಿಸಿಕೆ ಹಂಚಿಕೊಂಡರು.
ಕ್ರೀಡಾಕೂಟದ ಸಂಯೋಜಕರಾದ ಉಪನ್ಯಾಸಕ ಶ್ರೀ ಹರಿಕೇಶವ್ ಪಂದ್ಯಕೂಟ ಆಯೋಜನೆ ಮತ್ತು ನಿರ್ವಹಣೆಯ ಜವಾಬ್ದಾರಿ ವಹಿಸಿದ ಪರಿಯನ್ನು ಪ್ರಸ್ತಾವಿಕ ನುಡಿಯಲ್ಲಿ ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಕ್ರಿಕೆಟ್ ಪಂದ್ಯದ ವಿಶ್ಲೇಷಕ ಬಿಲಾಲ್ ಬಹುಮಾನ ವಿತರಣೆ ನಡೆಸಿಕೊಟ್ಟು ಕಾರ್ಯಕ್ರಮ ನಿರೂಪಿಸಿದರು.