ಮಂಗಳೂರು, 31 ಮಾರ್ಚ್ 2025: ಶ್ರೀ ದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್ ಬಲ್ಲಾಳ್ಭಾಗ್ ಮಂಗಳೂರು ಇವರ ವತಿಯಿಂದ ಯುಗಾದಿ ಹಬ್ಬವನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಹೂಸ ವರುಷದ ಪ್ರಾರಂಭವನ್ನು ಮನಪೂರ್ವವಾಗಿ ಸ್ವೀಕರಿಸಲು ಬೇವು-ಬೆಲ್ಲ ಸ್ವೀಕರಿಸುವುದರೊಂದಿಗೆ ಕಾರ್ಯಕ್ರಮವನ್ನಾರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜಿನ ಮನೋವೈದ್ಯ ಶಾಸ್ರ್ತದ ಮುಖ್ಯಸ್ಥರಾದ ಡಾಕ್ಟರ್ ಸುಪ್ರಿಯಾ ಹೆಗ್ಡೆ ಅರೂರ್ ಇವರು, ತಾನಿಂದು ಈ ಕಾರ್ಯಕ್ರಮದಲ್ಲಿ ಭಾಗಿಯಗಿರುವುದಕ್ಕೆ ಹೆಮ್ಮೆಪಡುತ್ತಾ , ಶುಭ ಹಾರೈಸಿದರು ಪ್ರಾಂಶುಪಾಲಾರದ ಪ್ರೊ | ಕಸ್ತೂರಿ ಜೆ ಶೆಟ್ಟಿ ಉಪಸ್ಥಿತರಿದ್ದು, ತಮ್ಮ ಸುಮಧುರವಾದ ಮಾತುಗಳಿಂದ ಮಕ್ಕಳನ್ನು ಹುರಿದುಂಬಿಸಿದರು .

ಸಹಶಿಕ್ಷಕರಾದ ಸೌಜನ್ಯ ಆಚಾರ್ಯ , ಹಾಗೂ ಸ್ಮಿತ ಉಪಸ್ಥಿತರಿದ್ದು, ಅಮೃತ ನಿರೂಪಿಸಿದರು, ಧನ್ಯ ಸ್ವಾಗತಿಸಿದರು, ಶ್ರೀಪ್ರದ ಮಹತ್ವ ತಿಳಿಸಿದರು, ದಿವ್ಯ ಅತಿಥಿಯ ಪರಿಚಯ ನೀಡಿದರು, ರಮ್ಯಾ ವಂದಿಸಿದರು.ಹಬ್ಬದ ಪ್ರಯುಕ್ತ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಬಹುಮಾನವನ್ನು ನೀಡುವುದರ ಜೊತೆಗೆ ಸಿಹಿತಿಂಡಿಯನ್ನು ನೀಡಲಾಯಿತು . ವಿಭಾಗದ ಮಂತ್ರಿಮಂಡಲದ ಉಸ್ತುವಾರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.