ಮುಲ್ಕಿ, ಆಗಸ್ಟ್ 13, 2024 : ಶಾಲಾ ಶಿಕ್ಷಣ ಇಲಾಖೆ ಹಾಗೂ ವಿಜಯ ಪದವಿ ಪೂರ್ವ ಕಾಲೇಜು, ಮುಲ್ಕಿ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮುಲ್ಕಿ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವು ಮುಲ್ಕಿ ವಿಜಯ ಕಾಲೇಜಿನ ಕ್ರೀಡಾಂಗಣದಲ್ಲಿ ದಿನಾಂಕ 13-8-2024 ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಿಥುನ್ ಕೊಡುತ್ತೂರು ಅವರು ಉದ್ಘಾಟನೆಯನ್ನು ನೆರವೇರಿಸಿದರು. ವಿದ್ಯಾರ್ಥಿಗಳಲ್ಲಿ ಕ್ರೀಡೆ, ಶಿಸ್ತು, ಸಂಯಮ ಮೊದಲಾದ ಗುಣಗಳು ಕ್ರೀಡೆಯಿಂದ ಬರುತ್ತದೆ ಎಂದು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಯಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುಹಾಸ್ ಹೆಗ್ಡೆ ಇವರು ಮಾತನಾಡಿ ಪಾಠ ಪಠ್ಯ ಕ್ರಮಗಳ ಜೊತೆಗೆ ಕ್ರೀಡೆ ಇದ್ದಾಗ ವಿದ್ಯಾರ್ಥಿಗಳಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಹರ್ಷರಾಜ ಶೆಟ್ಟಿ, ಸದಸ್ಯರು ನಗರ ಪಂಚಾಯತ್ ಮುಲ್ಕಿ ಹಾಗೂ ಶ್ರೀ ನಂದನ, ತಾಲೂಕು ಕ್ರೀಡಾ ಸಂಯೋಜಕರು ದೈಹಿಕ ಶಿಕ್ಷಕರು ನಾರಾಯಣ ಗುರು ಪದವಿ ಪೂರ್ವ ಕಾಲೇಜು, ಕಾಟಿಪಳ್ಳ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಗೌರವಾನ್ವಿತ ಅತಿಥಿಗಳಾಗಿ ಡಾ. ಶ್ರೀಮಣಿ ಪ್ರಾಂಶುಪಾಲರು ವಿಜಯ ಪದವಿ ಕಾಲೇಜು, ಮುಲ್ಕಿ ಇವರು ಉಪಸ್ಥಿತರಿದ್ದರು.
ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ಸ್ಥಾನವನ್ನು ವಯಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪಮೀದಾ ಬೇಗಂ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳಾದ ಶ್ರೀ ಸುಧೀರ್ ಎನ್ ಬಾಳಿಗೆ ಹಾಗೂ ಆಶೋಕ್ ಕುಮಾರ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪುರುಷರ ವಿಭಾಗದ ವಿಜೇತರಾಗಿ ಎಸ್. ಡಿ. ಪಿ.ಟಿ, ಕಟೀಲು ಹಾಗೂ ರನ್ನರ್ ಅಪ್ ಆಗಿ ಸೈಂಟ್ ಜೋಸೆಫ್ ಕಾಲೇಜು, ಬಜೆ ಹಾಗೂ ಮಹಿಳೆಯ ವಿಭಾಗದ ವಿಜೇತರಾಗಿ ಪೊಂಪೈ ಕಾಲೇಜು, ಐಕಳ ಹಾಗೂ ರನ್ನರ್ ಅಪ್ ಆಗಿ ಎಸ್. ಡಿ. ಪಿ.ಟಿ, ಕಟೀಲು ಪ್ರಶಸ್ತಿ ಪಡೆದುಕೊಂಡರು. ಪ್ರತೀಕ್ಷಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವರ್ಣಿತ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀ ವಿಶ್ವೇಶ್ ಭಟ್ ವಂದಿಸಿದರು.