ಮಂಗಳೂರು, 4 ಅಕ್ಟೋಬರ್ 2024: ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ದಿನವೆಂದರೆ ಅದು ‘ಪ್ರತಿಭಾ ಪ್ರದರ್ಶನ ದಿನ’ ತಮ್ಮ ಕಲಿಕಾ ಕೌಶಲ್ಯವನ್ನು ಹೊರತುಪಡಿಸಿ ಯಾರಿಗೂ ತಿಳಿಯದ, ತಮಗೆ ಇರುವ ಇತರ ಪ್ರತಿಭೆಯನ್ನು ಎಲ್ಲರಿಗೂ ಪರಿಚಯಿಸಲು ವಿದ್ಯಾರ್ಥಿಗಳು ಈ ಒಂದು ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಗೆಲುವಿಗಿಂತ ಭಾಗವಹಿಸುವಿಕೆ ಯಾವಾಗಲೂ ಮುಖ್ಯವಾಗಿರುವಂಥದ್ದು ಎಂಬುದನ್ನು ಗಮನದಲ್ಲಿಟ್ಟುಕೊಂಡ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ತಯಾರಿಕೆಯ ಮೂಲಕ ಇತರ ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭಾ ಕೌಶಲ್ಯವನ್ನು ಹೊರ ಚಿಮ್ಮಿಸಿದರು.
ವಿದ್ಯಾರ್ಥಿಗಳ ಮನಸ್ಸು ಮೆಚ್ಚುವಂತಹ ಫ್ಯಾಶನ್ ಶೋ, ಹೇರ್ ಸ್ಟೈಲ್, ಬೆಂಕಿ ಇಲ್ಲದ ಅಡುಗೆ, ರಂಗೋಲಿ, ಮೆಹೆಂದಿ ಸ್ಪರ್ಧೆ, ರಸಪ್ರಶ್ನೆ, ಸಾಮೂಹಿಕ ನೃತ್ಯ, ಹಾಡು ಮುಂತಾದ ಸ್ಪರ್ಧೆಗಳನ್ನು ಕಾಲೇಜಿನ ಪ್ರಾಂಶುಪಾಲರು ಆಯೋಜಿಸಿದ್ದು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ತಂಡವನ್ನು ಗೆಲುವಿನತ್ತ ಸಾಗಿಸಿದರು.
ಕಾರ್ಯಕ್ರಮಕ್ಕೆ ಕೆ. ಪಾಂಡ್ಯರಾಜ್ ಬಲ್ಲಾಳ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ, ಸೋನಿಯಾ ಸೆಬಾಸ್ಟಿಯನ್ ಹಾಗೂ ನರ್ಸಿಂಗ್ ಕಾಲೇಜಿನ ಸಿಬ್ಬಂದಿಗಳು ಪ್ರೋತ್ಸಾಹವನ್ನು ನೀಡಿ ಕೆಲವೊಂದು ಸ್ಪರ್ಧೆಗಳ ತೀರ್ಪನ್ನು ನಿರ್ಧರಿಸಿದರು. ಕಾರ್ಯಕ್ರಮದಲ್ಲಿ ಕೆ. ಪಾಂಡ್ಯ ರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶರ್ಮಿಳ ಮುಖೇಶ್ ರಾವ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.