ಚಿತ್ರಾಪುರ, 18 ಜನವರಿ 2024: ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ದಿನಾಂಕ 12 ರಿಂದ 18ರವರೆಗೆ ಚಿತ್ರಪುರದಲ್ಲಿ ನಡೆಯುತ್ತಿದೆ. ಇಲ್ಲಿಯ ಸುಮಾರು 400 ವರ್ಷ ಇತಿಹಾಸವುಳ್ಳ ಉತ್ತರದ ಪಣಂಬೂರಿನ ಬೋರ್ಮಾಡಿ ಗ್ರಾಮದಿಂದ ದಕ್ಷಿಣದ ಕುಲಾಯಿ ಚಿತ್ರಾಪುರಕ್ಕೆ 1964ರಲ್ಲಿ ಬಂದ, ಆರ್ಯ ಸಮಾಜದ ಪ್ರಭಾವಕ್ಕೆ ಒಳಗೊಂಡ ಮೊಗವೀರ ಸಂಘವು ಮೊಗವೀರ ಮಹಾಸಭಾ ಪಣಂಬೂರು, ಕುಳಾಯಿ ಎಂದು ಮರುನಾಮಾಂಕಿತಗೊಂಡು ತನ್ನನ್ನು ತಾನು ಜನಸೇವೆಗೆ ತೊಡಗಿಸಿಕೊಂಡಿದೆ.
ಈ ಮಹಾಸಭಾ 25 ಜನರ ಸಮಿತಿಯನ್ನು ರಚಿಸಿ ತನ್ನದೇ ಆದ ನ್ಯಾಯಾಂಗ ವ್ಯವಸ್ಥೆಯನ್ನು ಕಲ್ಪಿಸಿ ಯಾವುದೇ ಕಾನೂನನ್ನು ತಮ್ಮದೇ ಆದ ಕಾನೂನು ಚೌಕಟ್ಟಿನಲ್ಲಿ ನಿಭಾಯಿಸುವ ಸಲುವಾಗಿ ಗ್ರಾಮಸಭೆ, ಸಂಯುಕ್ತ ಸಭೆ ಮತ್ತು ಮಹಾಜನ ಸಂಘವನ್ನು ಸ್ಥಾಪಿಸಿ ಅದರೊಳಗೆ ತೀರ್ಮಾನ ಕೊಡುವುದು ಬಹಳ ವಿಶಿಷ್ಟವಾದ ಪದ್ಧತಿ. ಇದೊಂದು ರಾಜ್ಯ ವಂಶ ಅವಲಂಬಿಕೆಯನ್ನು ಬಿಂಬಿಸುತ್ತದೆ.
ಸಭಾವೂ ತನ್ನನ್ನು ತಾನು ತನ್ನ ಸಮಾಜದ ಜನರ ಏಳಿಗೆಗಾಗಿ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಅವುಗಳಲ್ಲಿ ಕೆಲವು- ವಿದ್ಯಾರ್ಥಿವೇತನ, ಮದುವೆ ಸಾಲ, ಬಡ್ಡಿ ಇಲ್ಲದ ವೈಯಕ್ತಿಕ ಸಾಲ, ಶವ ಸಂಸ್ಕಾರಕ್ಕಾಗಿ ಕೊಡುವ ಹಣ, ಮರಣಾನಿಧಿಯಿಂದ ಬರುವ ಹಣ, ಇತ್ಯಾದಿಗಳನ್ನು ಮಾನವೀಯತೆಯ ದೃಷ್ಟಿಯಿಂದ ನಿಭಾಯಿಸಿಕೊಂಡು ಬಂದಿದೆ.ಅಲ್ಲದೆ 1976ರಲ್ಲಿ ಶೌಚಾಲಯ ಸೌಲಭ್ಯಕ್ಕಾಗಿ ಸರಕಾರದಿಂದ ಗೌರವ ಮತ್ತು 2019ರಲ್ಲಿ ಕಡಲ ಕೊರೆತ ಸಂಪೂರ್ಣ ತಡೆಗಟ್ಟಲು 10 ಫೀಟ್ 600 ಮೀಟರ್ ಉದ್ದದ ತಡಗೋಡೆಯನ್ನು 200 ಜನ 29 ದಿನದಲ್ಲಿ ನಿರ್ಮಿಸಿ ಸರಕಾರದಿಂದ ಗೌರವ ಮನ್ನಣೆ ಪಡೆದ ಏಕ ಮಾತ್ರ ಸಮಾಜ.
ಇಷ್ಟು ಮಾತ್ರವಲ್ಲದೆ ಕೊರೋನಾ ಸಂದರ್ಭದಲ್ಲಿ ಆರು ಬಾರಿ ಮನೆ ಮನೆಗೆ ಕಿಟ್ ವಿತರಣೆ ಮಾಡಿದೆ. ಗ್ರಾಮಕ್ಕೊಂದು ಶಾಲೆ ಬೇಕು ಎಂದು ನೆನೆದು ಸರಕಾರಿ ಶಾಲಾ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿತಲ್ಲದೆ ಸರಕಾರಿ ಶಾಲೆಯಲ್ಲಿ ರಾತ್ರಿ ಶಿಕ್ಷಣವನ್ನು ಪ್ರಾರಂಭಿಸಿದ ಮೊದಲ ಸಮಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಜನಾ ಮಂಡಳಿ ನಿರ್ಮಾಣ ಕೋಸ್ಕರ ದಿನವೊಂದಕ್ಕೆ ಒಂದೊಂದು ಮನೆಯಿಂದ 10 ರೂಪಾಯಿಗಳಂತೆ ಸಂಗ್ರಹಿಸಿ (ಏಳು ವರ್ಷಗಳ ಕಾಲ) ಮುಂದಿನ ಒಂದು ವರ್ಷದೊಳಗೆ ಭಜನಾ ಮಂಡಳಿ ನಿರ್ಮಾಣ ಮಾಡುವ ಪಣತೊಟ್ಟಿರುವ ಸಭಾವಿದು. ಈ ಸಬಾವು ಇನ್ನಷ್ಟು ಹೊಸ ಹೊಸ ಯೋಜನೆಗಳನ್ನು ರೂಪಿಸಿ ತಮ್ಮ ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಪ್ರಾರ್ಥಿಸುತ್ತಾ ಸ್ವಸ್ತಿಕ ಸೇವಾ ರತ್ನ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತಿದೆ .ಪ್ರಶಸ್ತಿಯನ್ನು ಉಡುಪಿಯ MLA ಆದಂತಹ ಎಚ್. ಪಾಲ್ ಸುವರ್ಣ ಹಾಗೂ ಲೋಕಾಯುಕ್ತದ ಎಚ್. ಪಿ. ಆದಂತಹ ನಟರಾಜ್ ಹಾಗೂ ಇತರ ಅತಿಥಿಗಳು ನೀಡಲಿದ್ದಾರೆ.