ಮಂಗಳೂರು, 20 ನವೆಂಬರ್ 2025: ಶ್ರೀ ನಾಟ್ಯಾ೦ಜಲಿ ಕಲಾ ಅಕಾಡೆಮಿ (ರಿ) ಸುರತ್ಕಲ್ ಮತ್ತು ನಾಟ್ಯರಾಧನಾ ಕಲಾ ಕೇಂದ್ರ (ರಿ) ಉರ್ವ ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ನಲ್ವತ್ತರ ನಲಿವು ಸರಣಿ 23ನೇ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ‘ಶ್ರೀರಾಮ ದರ್ಶನ’ ಪ್ರಸಂಗವು ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ಸ್ ಸ್ಕೂಲ್, ಇಲ್ಲಿ ನೆರವೇರಿತು.
ಹಿಮ್ಮೇಳದಲ್ಲಿ ಶ್ರೀ ದಯಾನಂದ ಕೋಡಿಕಲ್, ಶ್ರೀ ಸಮರ್ಥ ಉಡುಪ ಕತ್ತಲ್ಸಾರ್, ಹಾಗೂ ಶ್ರೀ ಧೀರಜ್ ಆಚಾರ್ಯ ಇವರ ಪ್ರಸ್ತುತಿಗೆಯಿಂದ ಸುಂದರವಾಗಿ ಆರಂಭಗೊಂಡಿತು. ನಂತರ ಮುಮ್ಮೇಳದಲ್ಲಿ ಶ್ರೀ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಮತ್ತು ವಿದುಷಿ ಸುಮಂಗಲಾ ರತ್ನಾಕರ್ ರಾವ್, ಮಂಗಳೂರು ಇವರು ಪ್ರದರ್ಶನ ನೀಡಿದರು.
ಕಾರ್ಯಕ್ರಮವನ್ನು ಶ್ರೀ ರಾಘವೇಂದ್ರ ಹೊಳ್ಳ ಇವರು ಉದ್ಘಾಟಿಸಿದರು, ಯಕ್ಷಗಾನ ಕಲೆಯ ಸಂಸ್ಕೃತಿ ಮತ್ತು ಅದನ್ನು ಉಳಿಸಿ ಬೆಳೆಸುವ ಅಗತ್ಯವನ್ನು ತಮ್ಮ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮದ ಡಾ. ಮಾಲಿನಿ ಎನ್ ಹೆಬ್ಬಾರ್ ಇವರು ಕಾರ್ಯಕ್ರಮಕ್ಕೆ ಶುಭಾಹಾರೈಸಿದರು ,ಶ್ರೀ ಬಿ ರತ್ನಾಕರ ರಾವ್, ಶ್ರೀಮತಿ ವಿದ್ಯಾಲಕ್ಷ್ಮೀ ಶೆಟ್ಟಿ , ಯಕ್ಷ ವಾಸ್ಯ0 ನ ಕಾರ್ಯದರ್ಶಿ ಕುಮಾರಿ ಜನನಿ ಇವರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಯಕ್ಷ ವಸ್ಯಾಂ ನ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು