ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ವಿಭಾಗ ಮತ್ತು ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್, ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಅಬ್ಬಕ್ಕ@500 ಪ್ರೇರಣದಾಯಿ ೧೦೦ ಉಪನ್ಯಾಸಗಳ ಸರಣಿ ಎಸಳು 45ರ ಕಾರ್ಯಕ್ರಮವು ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಇದರ ಸಭಾಂಗಣದಲ್ಲಿ ಇದೇ ಸೋಮವಾರ ಬೆಳಿಗ್ಗೆ 9:00 ಉದ್ಘಾಟನೆಗೊಂಡಿತು.
ಶ್ರೀ. ಕೆ.ಪಿ. ವಿಕಾಸ್ ಶೆಣೈ ಲೆಕ್ಕಪರಿಶೋಧಕರು ಮಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟನೆ ಗೊಳಿಸಿದರು. ಶ್ರೀಮತಿ ಮಮತಾ ಮಾಧ್ಯಮ ಪ್ರಮುಖ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ವಿಭಾಗ, ಇವರು ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಲತೇಶ್ ಬಾಕ್ರಬೈಲು ಸಹ ಕಾರ್ಯದರ್ಶಿ, ಅಖಿಲ ಭಾರತ ಸಾಹಿತ್ಯ ಪರಿಷತ್, ದಕ್ಷಿಣ ಕನ್ನಡ ಜಿಲ್ಲೆ, ಇವರು ರಾಣಿಅಬ್ಬಕ್ಕನ ಕುರಿತು ವಿವರಣೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಆಶಾಲತಾ ಕನ್ನಡ ಉಪನ್ಯಾಸಕಿ,ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಸಂಧ್ಯಾ ಕಾರ್ಯಕ್ರಮ,ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಉಪಪ್ರಾಂಶುಪಾಲೆ ಶ್ರೀಮತಿ ವಿದ್ಯಾಲಕ್ಷ್ಮಿ ಪಿ. ಶೆಟ್ಟಿಯವರು ಸ್ವಾಗತಿಸಿ, ಶ್ರೀಮತಿ ಉಷಾನರೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು,ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.