ಸ್ವಾಮಿ ವಿವೇಕಾನಂದ ಕಾಲೇಜು ಎಡಪದವು ಇಲ್ಲಿನ ವಿದ್ಯಾರ್ಥಿಗಳು ಮಿನಿ ಒಲಂಪಿಕ್ಸ್ ಮಂಗಳ ಥ್ರೋಸ್ ಅಕಾಡೆಮಿ ಮಂಗಳೂರನ್ನು ಪ್ರತಿನಿದಿಸಿದ ವಿಧ್ಯಾರ್ಥಿಗಳಾದ ರಶ್ವಿತ್ 81 ,ಚಿನ್ನದ ಪದಕ ನಿಶ್ಚಿತ್ 81+ ಚಿನ್ನದ ಪದಕ ಮತ್ತು ತೇಜಸ್ವಿ 64 ಚಿನ್ನ TVದ ಪದಕ ಹಾಗೂ ಮಂಜುನಾಥ್ 49 ಬೆಳ್ಳಿಯ ಪದಕ ಅರ್ಜುನ್ 55 ಚಿನ್ನದ ಪದಕ, ಮುತ್ತಪ್ಪ 55 ಕಂಚಿನ ಪದಕ ಪಡೆದು 4 ಚಿನ್ನ 1 ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಪಡೆಯುವುದರೊಂದಿಗೆ ದ. ಕ ಜಿಲ್ಲೆ ಬಾಲಕರ ತಂಡ ಪ್ರಥಮ ಸ್ಥಾನವನ್ನು ಗಳಿಸಿತು.
ಇದರಲ್ಲಿ ಅರ್ಜುನ್, ಮಂಜುನಾಥ್ ಮತ್ತು ಮುತ್ತಪ್ಪ ಸ್ವಾಮಿವಿವೇಕಾನಂದ ಪ. ಪೂ. ಹೈಸ್ಕೂಲಿನ ವಿದ್ಯುರ್ಥಿಗಳಾಗಿದ್ದು ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ. ಅವರಿಗೆ ಪ್ರಾoಶುಪಾಲರು,ತರಬೇತಿ ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕರು ಮತ್ತು ಆಡಳಿತಧಿಕಾರಿ ಶ್ರೀಯುತ ಪ್ರೆಮನಾತ್ ಶೆಟ್ಟಿ ಯಾವರು ಮತ್ತು ಮುಖ್ಯಯೊಪಾದ್ಯಾರು ಮತ್ತು ಉಪನ್ಯಾಸಕ ವೃಂದದವರು ಶುಭ ಹಾರೈಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಹಾಗೆಯೇ ಬಾಲಕಿಯರ ವಿಭಾಗದಲ್ಲಿ ಶ್ರಾವಣಿ ಚಿನ್ನದ ಪದಕ, ಪ್ರಥ್ವಿಕ ಚಿನ್ನದ ಪದಕ ,ರವಿನ ಬೆಳ್ಳಿಯ ಪದಕ ಮತ್ತು ಮೋನಿಷಾ ಕಂಚಿನ ಪದಕ ಪಡೆಯುವುದರೊಂದಿಗೆ ಒಟ್ಟು ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿಯರ ತಂಡವು ದ್ವಿತಿಯ ಸ್ಥಾನವನ್ನುಗಳಿಸಿದೆ. ಇದರಲ್ಲಿ ಯಶ್ವಿತಾ ಡಿ, ಇಂದುಶ್ರೀ, ಲಾವಣ್ಯ, ಶೋಭಿತಾ ಭಾಗವಹಿಸಿರುತ್ತಾರೆ.ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.