ಎಡಪದವು, 5 ಅಕ್ಟೋಬರ್ 2024: ಶಾಲಾಶಿಕ್ಷಣ ಇಲಾಖೆ (ಪದವಿಪೂರ್ವ )ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಟೆನಿಸ್ ವಾಲಿಬಾಲ್, ಜಂಪ್ ರೋಪ್, ಫ್ಲೋರ್ ಬಾಲ್, ಸಿಲೇಬಾಂಮ್ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಮತ್ತು ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ, ಶ್ರೀಮತಿ ಗಾಯತ್ರಿ ಸರಕಾರಿ ಪ್ರೌಢಶಾಲೆ ಹೊಸಬೆಟ್ಟು, ಶ್ರೀ ಯೋಹನ್ ಗ್ರೀನ್ ಅರ್ಥ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ಮತ್ತು ನಿರ್ದೇಶಕರು, ಶ್ರೀ. ಶಶಿಧರ್ ಮಾಣಿ (ಜಿಲ್ಲಾ ಕ್ರೀಡಾ ಸಂಯೋಜಕರು,) ಮತ್ತು ರವಿರಾಜ್, ಶ್ರೀ ಪ್ರೇಮನಾಥ್ ಶೆಟ್ಟಿ ಆಡಳಿತಧಿಕಾರಿ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರು, ಶ್ರೀಮತಿ ಗಾಯತ್ರಿ ಪ್ರಾಂಶುಪಾಲರು, ಶ್ರೀ ವಾಸು ಕೆ ಸಮಾಜವಿಜ್ಞಾನ ಹಿರಿಯ ಸಹ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಗಾಯತ್ರಿ ಅಧ್ಯಕ್ಷೀಯ ನುಡಿಗಳನ್ನು ಮಾತನಾಡಿದರು. ಶ್ರೀ ಪ್ರೇಮನಾಥ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶ್ರೀಮತಿ ವಸಂತಿ ಕನ್ನಡ ಶಿಕ್ಷಕರು ಹೈಸ್ಕೂಲ್ ವಿಭಾಗ ನಿರೂಪಣೆ ಮಾಡಿದರು,ಶ್ರೀಮತಿ ಮಮತಾ ಆಂಗ್ಲ ಭಾಷ ಶಿಕ್ಷಕಿ ಸ್ವಾಗತಿಸಿ ಮತ್ತು ಶ್ರೀಮತಿ ಭವಿನ ವಿಜ್ಞಾನ ವಂದಿಸಿದರು.