ಪುತ್ತೂರು: ಶಿಕ್ಷಣ ಇಲಾಖೆಯ ವತಿಯಿಂದ ನಡೆದ ೨೦೨೪-೨೫ ರ ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುದಾನ ವಸತಿ ಶಾಲೆಯ ೧೧ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಗೊಂಡಿರುತ್ತಾರೆ.
೭ನೇ ತರಗತಿಯ ಜಯಂತ್ ೬೦೦ಮೀ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ.
೭ನೇ ತರಗತಿಯ ಮಹಮ್ಮದ ಮಾಹಿರ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ.
೮ನೇ ತರಗತಿಯ ಯಶವಂತ್ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ.
೬ನೇ ತರಗತಿಯ ಶ್ರೀ ಈಶ ಎನ್ ಹೆಗ್ಡೆ ೬೦೦ ಮೀ ನಲ್ಲಿ ತೃತೀಯ ಸ್ಥಾನ.
೧೦ನೇ ತರಗತಿಯ ವಿಘ್ನೇಶ್ ಸಿ ರೈ ಗುಂಡು ಎಸೆತದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ – ತೃತೀಯ ಸ್ಥಾನ
೮ನೇ ತರಗತಿಯ ಶಶಾಂಕ್ ೨೦೦ ಮೀ, ೪೦೦ ಮೀ ದ್ವಿತೀಯ, ೧೦೦ ಮೀ ತೃತೀಯ ಸ್ಥಾನ.
೯ನೇ ತರಗತಿಯ ಗಗನ್ ೧೦೦ ಮೀ, ೨೦೦ಮೀ ತೃತೀಯ ಸ್ಥಾನ.
ಅಕಿಲ್ (೯ನೇ), ಆಭೀನ್ ಎಸ್ ರೈ (೯ನೇ), ಯಶಸ್ (೯ನೇ), ಅರ್ನವ್ ಅನಂತ್ ಅರಿಗ (೧೦ನೇ) ೪೧೦೦ ಮೀ ರಿಲೇ ಯಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಉದಯ್ (೮ನೇ), ಸಹನ್ ಎಸ್ (೮ನೆ), ತನ್ಮಯ್(೮ನೇ) ೪೧೦೦ ಮೀ ರಿಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾನಾಗರಾಜ್ ಅಭಿನಂದಿಸಿ, ಶುಭಹಾರೈಸಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ. ಲೀಲಾವತಿ, ಶ್ರೀ. ಪುಷ್ಪರಾಜ್, ಶ್ರೀ. ನವೀನ್ ಮತ್ತು ಶ್ರೀನಿಧಿ ಆರ್ಯಪು ತರಬೇತಿ ನೀಡಿದ್ದಾರೆ.