ಸುಳ್ಯ, 15 ಅಕ್ಟೋಬರ್ 2025: ಸುಳ್ಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಕಾರ್ಯಕ್ರಮವು ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೇರಿಸ್ಟೆಲ್ಲಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ನಾಯಕಿ ಅನಿಂದ್ರಿತ ಹತ್ತನೇ ಇವರು, ಮಂತ್ರಿಗಳು ಕೈಗೊಂಡಂತ ಕೆಲಸ ಕಾರ್ಯಗಳ ಬಗ್ಗೆ ವಿವರವನ್ನು ನೀಡಿದರು.
ವಿದ್ಯಾರ್ಥಿ ಸಂಘದ ಸದಸ್ಯರು ತಾವು ನಡೆಸಿದ ಕಾರ್ಯ ಚಟುವಟಿಕೆಯ ಬಗ್ಗೆ ವಾದ ಪ್ರತಿವಾದ ನಡೆಸಿದರು. ಶಾಲಾ ಅಧಿವೇಶನದಲ್ಲಿ ಚರ್ಚಾ ವಿಷಯವಾಗಿ ದಸರಾ ರಜೆಯಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿಷಯದ ಕುರಿತು ವಿದ್ಯಾರ್ಥಿಗಳು ಚರ್ಚಿಸಿದರು.
ವಿದ್ಯಾರ್ಥಿಗಳಾದ ವಿಕಾಸ್.ಜಿ.ಕೆ ಸ್ವಾಗತಿಸಿ, ರಕ್ಷಣ್.ಕೆ ಧನ್ಯವಾದ ಸಮರ್ಪಿಸಿ, ಭುವಿ.ಜಿ.ರೈ ಹತ್ತನೇ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪ್ರತೀಕ್ಷ.ಕೆ.ಜಿ ಸಭಾಧ್ಯಕ್ಷರು, ಆಡಳಿತ ಹಾಗೂ ವಿರೋಧ ಪಕ್ಷದ ಮಹತ್ವವನ್ನು ತಿಳಿಸಿದಳು.
ಶಿಕ್ಷಕಿಯರಾದ ರೋಹಿಣಿ. ಟಿ ಹಾಗೂ ಜ್ಯೋತಿ. ಜೆ. ರೈ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.